ಮಂಗಳೂರು: ‘ನಗರದ ಆರು ಮಂದಿ ಡ್ರಗ್ ಪೆಡ್ಲರ್ಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಉಗಾಂಡದ ಮಹಿಳೆಯನ್ನು ಬೆಂಗಳೂರು ಸಮೀಪದ ಜಿಗಣಿಯಲ್ಲಿ ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದು, ಆಕೆಯಿಂದ ₹4 ಕೋಟಿ ಮೌಲ್ಯದ 4 ಕೆ.ಜಿ. ಎಂಡಿಎಂಎ ಅನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಜಲಿಯಾ ಝಲ್ವಾಂಗೊ ಬಂಧಿತ ಮಹಿಳೆ. ಈಕೆ ಬೆಂಗಳೂರಿನಿಂದ ಮಂಗಳೂರಿನ ಆರು ಮಂದಿ ಡ್ರಗ್ ಪೆಡ್ಲರ್ಗಳಿಗೆ ಎಂಡಿಎಂಎ ಪೂರೈಕೆ ಮಾಡುತ್ತಿದ್ದಳು. ಈಕೆಯ ಬಂಧನದಿಂದ ಮಂಗಳೂರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಜಾಲವನ್ನು ತುಂಡರಿಸಿದಂತಾಗಿದೆ ಎಂದು ಅವರು ಹೇಳಿದ್ದಾರೆ.

ಡ್ರಗ್ ಪೆಡ್ಲರ್ಗಳಾದ ಉಡುಪಿ ಜಿಲ್ಲೆ ಕಾಪು ಅಚ್ಚಾಲುವಿನ ಮೊಹಮ್ಮದ್ ಇಕ್ಬಾಲ್ (30), ಪಡುಬಿದ್ರಿ ಕಂಚಿನಡ್ಕದ ಶೆಹರಾಜ್ ಶಾರೂಕ್ (25), ಬೈಂದೂರು ತಾಲ್ಲೂಕು ಚಾತಿನ್ಕೆರೆ ಮೊಹಮ್ಮದ್ ಶಿಯಾಬ್ (22), ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ನರಿಂಗಾನದ ಮೊಹಮ್ಮದ್ ನೌಷದ್ (29), ಮಂಗಳೂರು ಕಸಬಾ ಬೆಂಗ್ರೆಯ ಇಮ್ರಾನ್ (27), ಬಂಟ್ವಾಳ ರಾಮಲ್ಕಟ್ಟೆಯ ನಿಸಾರ್ ಅಹಮ್ಮದ್ (36) ಅವರನ್ನು ಬಂಧಿಸಲಾಗಿದೆ. ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸ್ ಕಸ್ಟಡಿಗೆ ಪಡೆದು ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.