ಮಂಗಳೂರು ಮಾರುಕಟ್ಟೆಗೆ ಹಾಸನ ಚಿಕ್ಕಮಗಳೂರು ಹಾಗೂ ಬೆಂಗಳೂರು ಭಾಗದಿಂದ ತರಕಾರಿ ಆವಕವಾಗುತ್ತದೆ. ಆ ಭಾಗದಲ್ಲಿ ಭಾರಿ ಮಳೆ ಆಗಿರುವುದರಿಂದ ತರಕಾರಿ ಕೊಳೆತು ಹೋಗಿದ್ದು ಆವಕ ಕಡಿಮೆಯಾಗಿದೆ. ಆಯುಧ ಪೂಜೆಯ ವೇಳೆಗೆ ತರಕಾರಿ ದರ ಮತ್ತಷ್ಟು ಹೆಚ್ಚಬಹುದು. ಉತ್ತಮ ಗುಣಮಟ್ಟದ ಸೊಪ್ಪೂ ಸಿಗುತ್ತಿಲ್ಲ ಎಂದು ವ್ಯಾಪಾರಿ ಮಹಮ್ಮದ್ ಇರ್ಫಾನ್ ಹೇಳಿದರು. ಹಾರಗಳು ದುಬಾರಿ: ಹೂವಿನ ಹಾರಗಳ ಬೆಲೆ ₹100ರಿಂದ ₹ 400ರವರೆಗೆ ಇದೆ. ಮಿಶ್ರ ಫಲಗಳ ಬುಟ್ಟಿಗೆ ₹120ರಿಂದ ₹130ರವರೆಗೆ ಇದೆ. ಪೂಜಾ ಸಾಮಗ್ರಿ ಬೆಲೆ ಏರಿಕೆ: ದುರ್ಗಾ ವಿಗ್ರಹ ಅಥವಾ ಚಿತ್ರ ಕಲಶ ಮಾವಿನ ಎಲೆಗಳು ಅರಿಶಿಣ ಕುಂಕುಮ ಧೂಪ ದೀಪ ಬತ್ತಿ ಕರ್ಪೂರ ತೆಂಗಿನಕಾಯಿ ವೀಳ್ಯದೆಲೆ-ಅಡಿಕೆ ಸಿಹಿ ತಿಂಡಿಗಳ ಬೆಲೆಯೂ ದುಬಾರಿಯಾಗಿದೆ.