ಮಂಗಳೂರು: ಪಬ್ ದಾಳಿ ಮತ್ತು ಹೋಂ ಸ್ಟೇ ದಾಳಿಯ ನಂತರ ಮಂಗಳೂರಿನಲ್ಲಿ ಮತೀಯ ವಾದ ತೀವ್ರವಾಗಿ ಹಬ್ಬಿದೆ. ಸಾಮಾಜಕ್ಕೆ ಅಂಟಿರುವ ಈ ಕ್ಯಾನ್ಸರ್ಗೆ ಚಿಕಿತ್ಸೆ ನೀಡಲು ಇನ್ನೂ ಸಾಧ್ಯವಾಗಲಿಲ್ಲ ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅಭಿಪ್ರಾಯಪಟ್ಟರು.

‘ಜೀರುಂಡೆ ಪುಸ್ತಕ’ ಪ್ರಕಟಿಸಿರುವ ಫಾತಿಮಾ ರಲಿಯಾ ಅವರ ಅನುಭವ ಕಥನ ‘ಕೀಮೋ’ವನ್ನು ಭಾನುವಾರ ಬಿಡುಗಡೆ ಮಾಡಿ ಮಾತನಾಡಿದ ಅವರು ಕೀಮೋ ಕೃತಿಯಲ್ಲಿ ಬೆಳಗಾವಿ ಭಾಗದಿಂದ ಬಂದಿದ್ದ ವೈದ್ಯರೊಬ್ಬರು ದಕ್ಷಿಣ ಕನ್ನಡದಲ್ಲಿ ಜಾತಿ–ಧರ್ಮದ ಹೆಸರಿನಲ್ಲಿ ಬೇಧ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದ ಪ್ರಸಂಗವೊಂದು ಇದೆ. ಆ ವೈದ್ಯ 2007ರಲ್ಲೇ ಇಲ್ಲಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದರು. ಆದರೆ ಸ್ಥಳೀಯರು ಅದನ್ನು ಗುರುತಿಸಿದ್ದಾರೆಯೇ ಇಲ್ಲವೇ ಎಂಬುದರ ಬಗ್ಗೆ ಚಿಂತನೆ ನಡೆಯಬೇಕು ಎಂದರು.

‘ದಕ್ಷಿಣ ಕನ್ನಡದವರಿಗೆ ನಾವೇ ಬುದ್ಧಿವಂತರು. ಎಲ್ಲ ಬಲ್ಲವರು, ನಾವಾಡುವ ಕನ್ನಡವೇ ಶ್ರೇಷ್ಠ ಇತ್ಯಾದಿ ಭಾವನೆ ಇದೆ. ಹೊರ ಜಿಲ್ಲೆಗಳಿಗೆ ಹೋಗಿ ನೋಡಿದಾಗ, ಅವರ ಆತ್ಮೀಯತೆಯ ಸವಿ ಅನುಭವಿಸಿದಾಗ ನಾವು ಏನೂ ಅಲ್ಲ ಎಂದೆನಿಸುತ್ತದೆ. ಇಲ್ಲಿ ಅಂದು ಮತ್ತು ಇಂದು ಮತೀಯತೆಯ ಸುತ್ತ ಎಲ್ಲವೂ ನಡೆಯುತ್ತದೆ. ಶಿಕ್ಷಣ, ಸಾಹಿತ್ಯ, ರಂಗಭೂಮಿ, ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಜಿಲ್ಲೆಗೆ ಸಂಬಂಧಪಟ್ಟ ಸುದ್ದಿಗಳಲ್ಲಿ ಈಗ ಹಿಂದು, ಮುಸ್ಲಿಂ, ದೇವಸ್ಥಾನ ಇತ್ಯಾದಿಗಳೇ ತಲೆಬರಹ. ಇಂಥ ರೋಗಕ್ಕೆ ಹಿಂದೆಯೇ ಔಷಧಿ ಕಂಡುಕೊಂಡಿದ್ದರೆ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ’ ಎಂದು ಡಾ.ಕಕ್ಕಿಲ್ಲಾಯ ಹೇಳಿದರು.

ಸಣ್ಣ ಜೀವಕೋಶದ ಒಳಗೆ ಆರಂಭಗೊಂಡು ಹರಡುವ, ಗಡ್ಡೆಯಾದ ನಂತರ ಸುತ್ತಲೂ ವ್ಯಾಪಿಸುವ ರೋಗವೇ ಕ್ಯಾನ್ಸರ್. ಅದು ಪತ್ತೆಯಾಗುವಾಗಲೇ 3 ವರ್ಷಗಳು ಕಳೆದಿರುತ್ತವೆ. ಮತೀಯವಾದವೂ ಇದೇ ರೀತಿ ಗೊತ್ತಿಲ್ಲದೇ ಹರಡುತ್ತದೆ. ಅಂಥ ಕ್ಯಾನ್ಸರ್ ಈಗ ಇಡೀ ಜಿಲ್ಲೆಯನ್ನು ಕಾಡುತ್ತಿದೆ. ಅದಕ್ಕೆ ಮದ್ದು ಅರೆಯಲೇಬೇಕು ಎಂದು ಅವರು ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಫಾತಿಮಾ ರಲಿಯಾ ‘ಇದು ಕ್ಯಾನ್ಸರ್ ಕುರಿತ ಕೃತಿ ಅಲ್ಲ. ಅಮ್ಮ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಕಂಡ ಬದುಕಿನ ಚಿತ್ರಣ. ಜೀವ ಮತ್ತು ಜೀವನದ ಬವಣೆಯನ್ನು ಇಲ್ಲಿ ದಾಖಲು ಮಾಡಲಾಗಿದೆ’ ಎಂದರು.

ರೋಗಿಯನ್ನು ಮತ್ತು ಅವರ ಜೊತೆ ಇರುವವರನ್ನು ಕ್ಯಾನ್ಸರ್ ದೈಹಿಕವಾಗಿಯೂ ಮಾನಸಿಕವಾಗಿಯೂ ಬಳಲಿಸುತ್ತದೆ. ಮನೋಧೈರ್ಯವನ್ನು ಕುಗ್ಗಿಸುತ್ತದೆ. ಅಂಥ ಸಂದರ್ಭದಲ್ಲಿ ರೋಗಿ ಮತ್ತು ಅವರ ಸಂಬಂಧಿಕರು ಜೀವನೋತ್ಸಾಹ ಉಳಿಸಿಕೊಳ್ಳುವುದೇ ಸಾಹಸ. ಆದ್ದರಿಂದ ಕೀಮೋ ಕೃತಿಯಲ್ಲಿ ಬದುಕಿನ ಪಾಠ ಮತ್ತು ಆಸ್ಪತ್ರೆ ಕಲಿಸಿದ ಪಾಠವಿದೆ ಎಂದು ಫಾತಿಮಾ ತಿಳಿಸಿದರು.

ಲೇಖಕಿ ರಮ್ಯಾ ಕೆ.ಜಿ ಮೂರ್ನಾಡು ಮತ್ತು ಧರ್ಮಗುರು ಶರೀಫ್ ಹಿಮಮಿ ಶೆಟ್ಟಿಕೊಪ್ಪ ಪುಸ್ತಕದ ಬಗ್ಗೆ ಮಾತನಾಡಿದರು. ಇರ್ಫಾನ್ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಅಝೀಝ್ ಹೆಜಮಾಡಿ ವಂದಿಸಿದರು.

ಆಸ್ಪತ್ರೆಯಲ್ಲಿ ತಾಯಿಯ ಜೊತೆ ಕಳೆದ ದಿನಗಳಲ್ಲಿ ಕಂಡ ಸಂಕಟಗಳು ನನ್ನಲ್ಲಿರುವ ಅಹಂ ಕಳೆಯಲು ಕಾರಣವಾಯಿತು. ಬದುಕಿಗಾಗಿ ಮತ್ತು ಒಂದು ಗುಟುಕು ಜೀವಕ್ಕಾಗಿ ಹೋರಾಡುವವರ ಕಥೆ ಕೃತಿಯಲ್ಲಿದೆ.
ಫಾತಿಮಾ ರಲಿಯಾ ಲೇಖಕಿ

ಕೃತಿ: ಕೀಮೋ ಲೇಖಕಿ: ಫಾತಿಮಾ ರಲಿಯಾ ಪ್ರಕಾಶನ: ಜೀರುಂಡೆ ಪುಸ್ತಕ ಬೆಂಗಳೂರು ಪುಟಗಳು: 120 ಬೆಲೆ: ₹ 160

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.