ಮಂಗಳವಾರ, ಜನವರಿ 26, 2021
28 °C

ಚೆನ್ನೈ–ಮಂಗಳೂರು ಖಾಸಗಿ ರೈಲು ಶೀಘ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದೇಶದಾದ್ಯಂತ ಸಂಚರಿಸಲಿರುವ ಖಾಸಗಿ ರೈಲುಗಳ ಪ್ರಾಥಮಿಕ ಪಟ್ಟಿ ಸಿದ್ಧವಾಗಿದ್ದು, ದೇಶದ 12 ಕ್ಲಸ್ಟರ್‌ಗಳಲ್ಲಿ 152 ಖಾಸಗಿ ರೈಲುಗಳು ಸಂಚಾರ ನಡೆಸಲಿವೆ. ಚೆನ್ನೈ–ಮಂಗಳೂರು ರೈಲು ಇದರಲ್ಲಿ ಸೇರಿದೆ.

ಈ ಪೈಕಿ ಮೂರು ರೈಲುಗಳು ಕೇರಳದಲ್ಲಿ ಆರಂಭವಾಗಲಿದ್ದರೆ, ಒಂದು ರೈಲು ಚೆನ್ನೈನಿಂದ ಆರಂಭವಾಗಲಿದೆ. ಕುಚೂವೇಲಿ–ಲಂಬ್ಡಿಂಗ್‌ (ಆಸ್ಸಾಂ), ಕುಚೂವೇಲಿ–ಎರ್ನಾಕುಲಂ, ಎರ್ನಾಕುಲಂ–ಕನ್ಯಾಕುಮಾರಿ ಹಾಗೂ ಚೆನ್ನೈ–ಮಂಗಳೂರು ಮಾರ್ಗದಲ್ಲಿ ಖಾಸಗಿ ರೈಲುಗಳು ಓಡಲಿವೆ.

ಎರ್ನಾಕುಲಂ–ಕನ್ಯಾಕುಮಾರಿ ದೈನಂದಿನ ಸಂಚಾರ ನಡೆಸಲಿದ್ದು, ಉಳಿದ ರೈಲುಗಳು ವಾರದಲ್ಲಿ 2–3 ಬಾರಿ ಸಂಚರಿಸಲಿವೆ. ಈ ರೈಲುಗಳು ಸೀಮಿತ ನಿಲುಗಡೆ ಕಲ್ಪಿಸಲಾಗಿದ್ದು, ತ್ವರಿತಗತಿಯಲ್ಲಿ ಸಂಚಾರ ನಡೆಸಲಿವೆ. ಈಗಾಗಲೇ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿ ಸಂಚಾರ ಆರಂಭಿಸಲಿವೆ ಎಂದು ದಕ್ಷಿಣ ರೈಲ್ವೆ ಮೂಲಗಳು ತಿಳಿಸಿವೆ.

ಚೆನ್ನೈ ಕ್ಲಸ್ಟರ್‌ನಲ್ಲಿ 28 ಖಾಸಗಿ ರೈಲುಗಳಿಗೆ ಅವಕಾಶ ನೀಡಲಾಗಿದೆ. ಕುಚೂವೇಲಿ–ಲಂಬ್ಡಿಂಗ್‌ ರೈಲು ವಾರದಲ್ಲಿ ಮೂರು ದಿನ ಸಂಚರಿಸಲಿದೆ. ಗುರುವಾರ, ಶುಕ್ರವಾರ ಹಾಗೂ ಶನಿವಾರ ಕುಚೂವೇಲಿಯಿಂದ ಹೊರಡಲಿದ್ದು, ಭಾನುವಾರ, ಸೋಮವಾರ, ಮಂಗಳವಾರ ಲಂಬ್ಡಿಂಗ್‌ನಿಂದ ವಾಪಸ್‌ ಬರಲಿದೆ.

ಚೆನ್ನೈ–ಮಂಗಳೂರು ರೈಲು ಪ್ರತಿ ಮಂಗಳವಾರ ಸಂಜೆ 7.10ಕ್ಕೆ ಚೆನ್ನೈನಿಂದ ಹೊರಡಲಿದ್ದು, ಮರುದಿನ ಮಧ್ಯಾಹ್ನ 3.50ಕ್ಕೆ ಮಂಗಳೂರು ತಲುಪಲಿದೆ. ಪ್ರತಿ ಬುಧವಾರ ಸಂಜೆ 5.05ಕ್ಕೆ ಮಂಗಳೂರಿನಿಂದ ಹೊರಡುವ ಈ ರೈಲು ಮರುದಿನ ಬೆಳಿಗ್ಗೆ 8.30ಕ್ಕೆ ಚೆನ್ನೈ ತಲುಪಲಿದೆ. ಪಾಲ್ಘಾಟ್‌, ಕೊಯಿಕ್ಕೋಡ್‌ ಸೇರಿದಂತೆ 8 ನಿಲ್ದಾಣಗಳಲ್ಲಿ ಮಾತ್ರ ಈ ರೈಲು ನಿಲುಗಡೆ ಆಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು