ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂಐಎ ಪ್ರಾಂಗಣದಲ್ಲಿ ರೂಪುಗೊಳ್ಳಲಿದೆ ‘ವಿಮಾನನಿಲ್ದಾಣ ಹಳ್ಳಿ’

Published : 13 ನವೆಂಬರ್ 2023, 16:19 IST
Last Updated : 13 ನವೆಂಬರ್ 2023, 16:19 IST
ಫಾಲೋ ಮಾಡಿ
Comments

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದ (ಎಂಐಎ) ಆಸುಪಾಸಿನಲ್ಲಿ ಭೂಕುಸಿತ ತಡೆಯುವುದರ ಜೊತೆಗೆ, ಇಲ್ಲಿನ ಅಂದವನ್ನು ಹೆಚ್ಚಿಸುವ ಉದ್ದೇಶದಿಂದ ‘ಏರ್‌ಪೋರ್ಟ್‌ ವಿಲೇಜ್‌’ ಎಂಬ ವಿನೂತನ ಪರಿಕಲ್ಪನೆಯ  ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದರ ಮೊದಲ ಹಂತದ ಕಾಮಗಾರಿಯು ವಿಮಾನ ನಿಲ್ದಾಣ ಕಟ್ಟಡದ ಮುಂಭಾಗದ ನೆಲ ಮಹಡಿಯಲ್ಲಿ ಆರಂಭವಾಗಿದೆ.

‘ಈ ವಿಮಾನ ನಿಲ್ದಾಣಕ್ಕೆ ಆಗಾಗ ಭೇಟಿ ನೀಡುವವರಿಗೆ ಹಾಗೂ ನಗರ ವಾಸಿಗಳಿಗೆ ‘ವಿಮಾನನಿಲ್ದಾಣ ಹಳ್ಳಿ’ ವಿನೂತನ ಅನುಭವವನ್ನು ಕಟ್ಟಿಕೊಡಲಿದೆ. ನಗರ ನಿವಾಸಿಗಳಿಗೆ ಮಾಲ್‌, ಬೀಚ್‌ಗಳಲ್ಲಿ ದೊರೆಯುವ ಸೌಕರ್ಯಗಳನ್ನು ಇಲ್ಲಿ  ಒದಗಿಸಲಿದ್ದೇವೆ. ಆಸಕ್ತರಿಗಾಗಿ ವೈವಿಧ್ಯಮಯ ಆಹಾರ, ಪಾನೀಯ, ಚಿಲ್ಲರೆ ಸಾಮಾಗ್ರಿಗಳ ಮಾರಾಟ ಹಾಗೂ ಗೇಮ್ಸ್‌ಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಈ ವಿಮಾನ ನಿಲ್ದಾಣ ಟರ್ಮಿನಲ್‌ಗೆ ಭೇಟಿ ನೀಡುವವರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು’ ಎಂದು ಎಂಐಎ ವಕ್ತಾರರು ತಿಳಿಸಿದ್ದಾರೆ. 

‘ಈ ವಿಮಾನನಿಲ್ದಾಣವನ್ನು ಬಳಸುವರ ಜೊತೆಗೆ, ಅವರನ್ನು ಸ್ವಾಗತಿಸಲು ಬರುವ ಸ್ನೇಹಿತರು, ಬಂಧುಗಳ ಅಗತ್ಯಗಳನ್ನು ‘ಏರ್‌ಪೋರ್ಟ್‌ ವಿಲೇಜ್‌’ ಪರಿಕಲ್ಪನೆಯ ಮೂಲಕ ಪೂರೈಸಲಿದ್ದೇವೆ. ಮಳಿಗೆಗಳನ್ನು ತೆರೆಯುವವರಿಗೆ ಇಲ್ಲಿ ಸ್ಥಳಾವಕಾಶ ಕಲ್ಪಿಸಲಿದ್ದೇವೆ. ಕಾಮಗಾರಿಗಳು ಪೂರ್ಣಗೊಂಡ ಬಳಿಕ ಇದು, ಗೇಮ್ಸ್‌ಗಳಲ್ಲಿ ಭಾಗವಹಿಸಿ ಮೋಜು ಪಡೆಯುವವರಿಗೆ, ಆಹಾರ ಪ್ರಿಯರಿಗೂ ಆಕರ್ಷಕ ತಾಣವಾಗಿ ಮಾರ್ಪಡಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT