ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಗೆಲ್ಲಲು ಛಲ ಇರಲಿ: ಮೋಹನದಾಸ ಪರಮಹಂಸ ಸ್ವಾಮೀಜಿ

ಶ್ರೀಧಾಮ ಮಾಣಿಲ ಕ್ಷೇತ್ರದಲ್ಲಿ ಸಾಮೂಹಿಕ ಲಕ್ಷ್ಮೀ ಪೂಜೆ
Last Updated 7 ಜುಲೈ 2022, 4:38 IST
ಅಕ್ಷರ ಗಾತ್ರ

ವಿಟ್ಲ: ಸಮಾಜದಿಂದ ನಮಗಾಗುವ ಅಪವಾದ, ವಿರೋಧವನ್ನು ಮೆಟ್ಟಿನಿಲ್ಲುವ ಛಲ ನಮ್ಮಲಿರಬೇಕು ಎಂದು ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಡೆಯಲಿರುವ ಸಾಮೂಹಿಕ ವರಮಹಾಲಕ್ಷ್ಮೀ ವ್ರತಾಚರಣೆಯ ಪ್ರಯುಕ್ತ 48 ದಿನಗಳ ವರೆಗೆ ನಡೆಯಲಿರುವ ಸಾಮೂಹಿಕ ಲಕ್ಷ್ಮೀ ಪೂಜೆಯ 15ನೇ ದಿನವಾದ ಭಾನುವಾರ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ನಮ್ಮ ಆಹಾರ ಪದ್ಧತಿಯ ಮೇಲೆ ನಮಗೆ ನಿಗಾ ಅಗತ್ಯ. ಗುರು ಹಾಗೂ ಗುರಿ ಇದ್ದರೆ ಜೀವನದಲ್ಲಿ ಸಾರ್ಥಕತೆ ಸಾಧ್ಯ. ನಾನು ನನ್ನದೆಂಬ ಭ್ರಮೆಯಿಂದ ಹೊರಬಂದು ಎಲ್ಲರನ್ನೂ ಪ್ರೀತಿಸುವ ಮನಸ್ಸು ನಿಮ್ಮಲ್ಲಿರಬೇಕು. ಭಕ್ತಿ ಮಾರ್ಗದಿಂದ ಮಾತ್ರ ಜಗತ್ತು ಉಳಿಯಲು ಸಾಧ್ಯ. ಸಿಟ್ಟು, ಉದ್ವೇಗ, ಆಕ್ರೋಶ ಬಿಟ್ಟು ಮುನ್ನಡೆಯಿರಿ. ಸ್ವಸ್ಥ ಸಮಾಜದ ನಿರ್ಮಾಣ ಈ ವ್ರತಚಾರಣೆಯ ಉದ್ದೇಶ ಎಂದರು.

ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕಾರ್ಯದರ್ಶಿ ಪದ್ಮನಾಭ ರಾಜ್ ಆರ್ ಮಾತನಾಡಿದರು.
ಸರಪಾಡಿ ಶರಭೇಶ್ವರ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಜಗನ್ನಾಥ ಚೌಟ, ಶಿಕ್ಷಕ ಯತಿರಾಜ್, ಪುರುಷೋತ್ತಮ ಪೆರುವಾಯಿ ಇದ್ದರು.

ಮಹಿಳಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಸ್ವಾಗತಿಸಿದರು. ದೀಕ್ಷಾ ಕಾಪಿಕ್ಕಾಡ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT