ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಮರಾಟಿ ಸಂರಕ್ಷಣಾ ಸಮಿತಿ ಕ್ರೀಡಾಕೂಟ 11ರಂದು

Published 2 ಫೆಬ್ರುವರಿ 2024, 4:24 IST
Last Updated 2 ಫೆಬ್ರುವರಿ 2024, 4:24 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯು ಮರಾಟಿ ಸಮಾಜದವರಿಗಾಗಿ ಇದೇ 11ರಂದು ಪುತ್ತೂರಿನ ಕೊಂಬೆಟ್ಟುವಿನಲ್ಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಸಮಿತಿಯ ಅಧ್ಯಕ್ಷ ಅಶೋಕ ನಾಯ್ಕ ಕೆದಿಲ, ‘ಗ್ರಾಮೀಣ ಪ್ರದೇಶದಲ್ಲಿ ಸಮಾಜದ ಅನೇಕ ಕ್ರೀಡಾ ಪ್ರತಿಭೆಗಳು ಎಲೆ ಮರೆಯ ಕಾಯಿಯಂತಿವೆ. ಅವರಿಗೆ ಉತ್ತೇಜನ ನೀಡಲು ಈ ಕ್ರೀಡಾಕೂಟ ಆಯೋಜಿಸಿದ್ದೇವೆ. ಶಾಲಾ-ಕಾಲೇಜು ವಿದ್ಯಾರ್ಥಿಗಳ ಜೊತೆಗೆ, ಯುವಕರಿಗೆ ಹಾಗೂ ಹಿರಿಯರಿಗೂ ಸ್ಪರ್ಧೆಗಳು ನಡೆಯಲಿವೆ. ಪುರುಷರಿಗೆ ಕಬಡ್ಡಿ, ಹಗ್ಗ ಜಗ್ಗಾಟ, ಕ್ರಿಕೆಟ್, ಮಹಿಳೆಯರಿಗೆ ಥ್ರೋಬಾಲ್, ಹಗ್ಗ ಜಗ್ಗಾಟ,  ಓಟದ ಸ್ಪರ್ಧೆ, ಹೈಜಂಪ್, ಲಾಂಗ್ ಜಂಪ್, ರಿಲೇ  ಸ್ಪರ್ಧೆಗಳಿವೆ’ ಎಂದರು.

ಮರಾಟಿ ಸಂರಕ್ಷಣಾ ಸಮಿತಿ ಐದು ವರ್ಷಗಳಿಂದ ಸಮಾಜದವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದೆ. ನಮ್ಮ ಸಮುದಾಯದವರ ಮನೆಗಳಿಗೆ  24 ಕಡೆ ಸಂಪರ್ಕ ರಸ್ತೆ  ನಿರ್ಮಿಸಿಕೊಡಲಾಗಿದೆ ಎಂದರು.

ಕ್ರೀಡಾ ಸಮಿತಿ ಸಂಚಾಲಕ ಯಶವಂತ ಮಂಡೆಕೋಲು, ಕ್ರೀಡಾಕೂಟ ಉಸ್ತುವಾರಿಗಳಾದ ಗಂಗಾಧರ, ರತ್ನಾವತಿ, ವೀಣಾಲತಾ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT