ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಂಜಾಲಕಟ್ಟೆ: 6 ಜೋಡಿ ಸಾಮೂಹಿಕ ಹಸೆಮಣೆಗೆ

ಸಾಧಕರಿಗೆ ಸ್ವಸ್ತಿಸಿರಿ ಪ್ರಶಸ್ತಿ ಪ್ರದಾನ
Published 25 ಮಾರ್ಚ್ 2024, 6:51 IST
Last Updated 25 ಮಾರ್ಚ್ 2024, 6:51 IST
ಅಕ್ಷರ ಗಾತ್ರ

ಬಂಟ್ವಾಳ: 16 ವರ್ಷಗಳ ಹಿಂದೆ ದಾನಿಗಳ ನೆರವಿನಲ್ಲಿ ಸ್ಥಳೀಯ ಮುಂದಾಳು ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಆರಂಭಗೊಂಡ ಉಚಿತ ಸಾಮೂಹಿಕ ವಿವಾಹದ ಮೂಲಕ ಸಾವಿರಾರು ಮಂದಿ ಸಾಂಸಾರಿಕವಾಗಿ ಉನ್ನತ ಬದುಕು ನಡೆಸುವಂತಾಗಿದೆ ಎಂದು ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಹೇಳಿದರು.

ಇಲ್ಲಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಭಾನುವಾರ ನಡೆದ ಉಚಿತ ಸಾಮೂಹಿಕ ವಿವಾಹ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷ್ಣ ಭಟ್ ಕಾರ್ಕಳ ನೇತೃತ್ವದ ಅರ್ಚಕರ ತಂಡ ವಿವಾಹದ ವಿಧಿವಿಧಾನ ನೆರವೇರಿಸಿದರು. ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶಾರದಾ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಎ.ಸುರೇಶ್ ರೈ ಮಾತನಾಡಿದರು.

ಮಾವಿನಕಟ್ಟೆ ಉದ್ಯಮಿ ಅಬ್ದುಲ್ ಕುಞಿ, ಜೆಸಿಐ ಅಧ್ಯಕ್ಷ ರಂಜಿತ್ ಎಚ್.ಡಿ., ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಮೋಹನದಾಸ ಕೊಟ್ಟಾರಿ, ಗುತ್ತಿಗೆದಾರ ಮೋಹನ್ ಶೆಟ್ಟಿ ನರ್ವಲ್ದಡ್ಕ, ಪಿಲಾತಬೆಟ್ಟು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರವಿಶಂಕರ ಹೊಳ್ಳ, ನಿರ್ದೇಶಕ ಸುಂದರ ನಾಯ್ಕ್, ಕೇರಳ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಅಜಿತ್ ಕುಮಾರ್, ಬಡಗಕಜೆಕಾರು ದೇವದಾಸ ಅಬುರ, ಉದ್ಯಮಿ ಇರ್ವತ್ತೂರು ಶೇಖರ ಪೂಜಾರಿ, ಲಕ್ಷ್ಮೀಶ್ ಉಡುಪಿ, ಶಂಕರ ಶೆಟ್ಟಿ, ಗಿರೀಶ್ ಸಾಲಿಯಾನ್, ಮುಂಬೈ ಉದ್ಯಮಿ ಕಕ್ಯಪದವು ನಾರಾಯಣ ಶೆಟ್ಟಿ, ಜಯಚಂದ್ರ ಬೊಳ್ಮಾರ್, ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಸಂಚಾಲಕ ರಾಜೇಶ್ ಪಿ.ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಕಾರ್ಯದರ್ಶಿ ಜಯರಾಜ್ ಅತ್ತಾಜೆ, ಮಾಜಿ ಅಧ್ಯಕ್ಷ ಮಾಧವ ಬಂಗೇರ ಭಾಗವಹಿಸಿದ್ದರು.

ಕ್ಲಬ್‌ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಸ್ವಾಗತಿಸಿ, ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ.ವಂದಿಸಿದರು. ಕಲಾವಿದ ಎಚ್. ಕೆ.ನಯನಾಡು ನಿರೂಪಿಸಿದರು.

ವಧು-ವರರ ದಿಬ್ಬಣ ಮೆರವಣಿಗೆಗೆ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಚಾಲನೆ ನೀಡಿದರು.

ಸಾಧಕರಿಗೆ ‘ಸ್ವಸ್ತಿ ಸಿರಿ’ ಪ್ರಶಸ್ತಿ ಪ್ರದಾನ, ‘ಸ್ವಸ್ತಿಕ್ ಸಂಭ್ರಮ’ ಪುರಸ್ಕಾರ ನಡೆಯಿತು.

ಸಂತೋಷ್ ಕುಮಾರ್ ತುಂಬೆ (ಶಿಕ್ಷಣ), ಅನ್ವೇಷ್ ಆರ್.ಶೆಟ್ಟಿ (ಯಕ್ಷಗಾನ), ಸದಾನಂದ ಅಮೀನ್ ಮಲ್ಪೆ (ಉದ್ಯಮ), ರಾಜು ಮಣಿಹಳ್ಳ (ದೈವ ನರ್ತನ), ಹಂಝ ಬಸ್ತಿಕೋಡಿ (ಸಮಾಜ ಸೇವೆ) ಅವರಿಗೆ ಸ್ವಸ್ತಿ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮನೋಜ್ ಕನಪಾಡಿ (ಕಲೆ), ಭಾಸ್ಕರ ರಾವ್ ಬಿ.ಸಿ.ರೋಡ್ (ಸಂಗೀತ), ಹೇಮಚಂದ್ರ ಗೌಡ ಸಿದ್ದಕಟ್ಟೆ (ಸಂಘಟನೆ), ಸಂದೀಪ್ ಸಾಲ್ಯಾನ್ (ಪತ್ರಿಕೆ), ಚಂದ್ರಪ್ಪ ಮದ್ದಡ್ಕ (ಶಿಕ್ಷಣ) ಅವರಿಗೆ ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT