ಮಂಗಳೂರು: ದಕ್ಷಿಣ ಕನ್ನಡ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ (ಡಿಕೆಎಂಎ) ಆಶ್ರಯದಲ್ಲಿ ಇಲ್ಲಿನ ಮಂಗಳಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಹಿರಿಯರು ಬಿಸಿಲ ಬೇಗೆಯನ್ನು ಲೆಕ್ಕಿಸದೇ ಎಳೆಯರನ್ನೂ ನಾಚಿಸುವಂತೆ ಹುರುಪಿನಿಂದ ಪಾಲ್ಗೊಂಡರು.

ಕ್ರೀಡಾಕೂಟದಲ್ಲಿ ಒಬ್ಬ ಅಥ್ಲೀಟ್ ಮೂರು ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿತ್ತು. 18 ಕ್ರೀಡಾಪಟುಗಳು ಭಾಗವಹಿಸಿದ ಮೂರು ವಿಭಾಗಗಳಲ್ಲಿ ಪ್ರಥಮ ಸ್ಥಾನ ಗೆಲ್ಲುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಅವರಿಗೆ ಪ್ರಮಾಣ ಪತ್ರ ಹಾಗೂ ₹ 500 ನಗದು ಬಹುಮಾನ ನೀಡಲಾಯಿತು.

ಚಿನ್ನದ ಪದಕ ಗೆದ್ದ ಪುರುಷರು: ಕ್ರೀಡಾಕೂಟದಲ್ಲಿ85 ವರ್ಷ ಮೀರಿದ ವಿಭಾಗದಲ್ಲಿ ಎಚ್.ಎಂ.ಹೊಂಬೇಗೌಡ (ಶಾಟ್ಪಟ್, ಹ್ಯಾಮರ್ ಥ್ರೋ, ಡಿಸ್ಕಸ್ ಥ್ರೋ), 80 ವರ್ಷ ಮೀರಿದ ವಯೋವಿಭಾಗದಲ್ಲಿ ರಾಧಾಕೃಷ್ಣ (ಟ್ರಿಪಲ್ ಜಂಪ್, ಲಾಂಗ್ ಜಂಪ್, ಹ್ಯಾಮರ್ ಥ್ರೊ), 75 ವರ್ಷ ವಯೋವಿಭಾಗದಲ್ಲಿ ಸಿ.ಬಿ.ಚಂದ್ರೇಗೌಡ (ಶಾಟ್ಪಟ್, ಹ್ಯಾಮರ್ ಥ್ರೊ, ಡಿಸ್ಕಸ್ ಥ್ರೋ), 50 ವರ್ಷ ಮೀರಿದ ವಯೋವಿಭಾಗದಲ್ಲಿ ನಾರಾಯಣ ಮೂಲ್ಯ, (200 ಮೀ, 400 ಮೀ ಹಾಗೂ 800 ಮೀ ಓಟ), 45 ವರ್ಷ ಮೀರಿದ ವಯೋವಿಭಾಗದಲ್ಲಿ ಚಂದ್ರಶೇಖರ್ (200 ಮೀ, 400 ಮೀ ಹಾಗೂ 800 ಮೀ ಓಟ), ವರ್ಷ ಮೀರಿದ ವಯೋವಿಭಾಗದಲ್ಲಿ ಅಶೋಕ್ ಕೆ.ವಿ ( ಶಾಟ್ಪಟ್, ಜಾವೆಲಿನ್ ಡಿಸ್ಕಸ್ ಥ್ರೊ) , 35 ವರ್ಷ ಮೀರಿದ ವಯೋವಿಭಾಗದಲ್ಲಿ ಗೋಕುಲ್ ಪೂಜಾರಿ (200 ಮೀ ಓಟ, ಶಾಟ್ಪಟ್, ಜಾವೆಲಿನ್ ಥ್ರೊ), 70 ವರ್ಷ ಮೀರಿದ ವಯೋವಿಭಾಗದಲ್ಲಿ ರವಿಕುಮಾರ್ (ಡಿಸ್ಕಸ್ ಥ್ರೊ, ಹ್ಯಾಮರ್ ಥ್ರೊ, ಲಾಂಗ್ ಜಂಪ್), 65 ವರ್ಷ ಮೀರಿದ ವಯೋವಿಭಾಗದಲ್ಲಿ ಇಬ್ರಾಹಿಂ ಉಮರ್ ಬ್ಯಾರಿ ದುಬೈ (ಶಾಟ್ಪಟ್, ಡಿಸ್ಕಸ್ ಥ್ರೊ, ಜಾವೆಲಿನ್).

ಚಿನ್ನದ ಪದಕ ಗೆದ್ದ ಮಹಿಳೆಯರು: 30 ವರ್ಷ ಮೀರಿದ ವಯೋವಿಭಾಗದಲ್ಲಿ ಹರಿಣಾಕ್ಷಿ ಡಿ. ( 100 ಮೀ, 200 ಮೀ , ಲಾಂಗ್ ಜಂಪ್), 50 ವರ್ಷ ಮೀರಿದ ವಯೋವಿಭಾಗದಲ್ಲಿ ಶ್ರೀದೇವಿ ಗಿರೀಶ್ (100 ಮೀ, 200 ಮೀ ಹಾಗೂ 400 ಮೀ ಓಟ), 45 ವರ್ಷ ಮೀರಿದ ವಯೋವಿಭಾಗದಲ್ಲಿ ಡಾ.ಸಾರಿಕಾ (800 ಮೀ, 1500 ಮೀ ಹಾಗೂ 3000 ಮೀ ಓಟ), 50 ವರ್ಷ ಮೀರಿದ ವಯೋವಿಭಾಗದಲ್ಲಿ ಬೀನಾ ಫರ್ನಾಂಡಿಸ್ ( 800 ಮೀ, 1500 ಮೀ ಹಾಗೂ 3000 ಮೀ ಓಟ), 40 ವರ್ಷ ಮೀರಿದ ವಯೋವಿಭಾಗದಲ್ಲಿಆಶಾ ಎ.ವಿ. ( ಶಾಟ್ಪಟ್, ಜಾವೆಲಿನ್ ಹಾಗೂ ಹ್ಯಾಮರ್ ಥ್ರೋ), 35 ವರ್ಷ ಮೀರಿದ ವಯೋವಿಭಾಗದಲ್ಲಿ ಭುವನೇಶ್ವರಿ (400 ಮೀ, 800 ಮೀ ಹಾಗೂ 1500 ಮೀ ಓಟ), ವಿವಿಧ ವಯೋವಿಭಾಗಗಳಲ್ಲಿ ಭಾಗಿರಥಿ ( ಶಾಟ್ ಪಟ್, ಜಾವೆಲಿನ್ ಥ್ರೊ, ಡಿಸ್ಕಸ್ ಥ್ರೋ), ಕೆ.ವಿಜಯಾ ಕುಮಾರಿ (ಲಾಂಗ್ ಜಂಪ್, ಟ್ರಿಪಲ್ ಜಂಪ್, 3000 ಮೀ ಓಟ), ಭವ್ಯಾ ಸಂದೀಪ್ ಶೆಟ್ಟಿ (100 ಮೀ ಓಟ, ಲಾಂಗ್ ಜಂಪ್, ಟ್ರಿಪಲ್ ಜಂಪ್).

ವಿವಿಧ ವಯೋ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ 350ಕ್ಕೂ ಹೆಚ್ಚು ಅಥ್ಲೀಟ್ಗಳು ಭಾಗವಹಿಸಿದರು. ಚಿಣ್ಣರಿಗೂ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಕ್ರೀಡಾ ಮತ್ತು ಯುವಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ, ಸಾಮಾಜಿಕ ಕಾರ್ಯಕರ್ತರಾದ ವಿಜಯಲಕ್ಷ್ಮೀ ಎಂ.ಮಲ್ಲಿ, ಕೃಪಾ ಎ ಶೆಟ್ಟಿ, ಚಂದ್ರಕಲಾ ರಾವ್, ಆಶಾ ನಾಗರಾಜ್, ಬಿಎಸ್ಎನ್ಎಲ್ ನಿವೃತ್ತ ಉಪಪ್ರಧಾನ ವ್ಯವಸ್ಥಾಪಕ ರಮಾನಾಥ ಎನ್ ಪೈ, ಮಂಗಳೂರು ಲಯನ್ಸ್ ಕ್ಲಬ್ ಖಜಾಂಚಿ ಚಂಚಲಾಕ್ಷಿ ಶೆಟ್ಟಿ ಭಾಗವಹಿಸಿದರು.

ಡಿಕೆಎಂಎ ಗೌರವಾಧ್ಯಕ್ಷ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ತೇಜೋಮಯ, ಡಿಕೆಎಂಎ ಅಧ್ಯಕ್ಷ ಜಗದೀಶ ಶೆಟ್ಟಿ, ಉಪಾಧ್ಯಕ್ಷೆ ರೇಖಾ ಶೆಟ್ಟಿ, ಕಾರ್ಯದರ್ಶಿ ಪ್ರಚೇತ್, ಖಜಾಂಚಿ ನಂದಕುಮಾರ್ ಮೊದಲಾದವರು ಕ್ರೀಡಾಕೂಟದ ಆಯೋಜನೆಗೆ ಸಹಕರಿಸಿರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.