ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ಬ್ರಿಜ್ ಚಾಂಪಿಯನ್‌ಷಿಪ್‌: ಮುಂದುವರಿದ ಮೇವರಿಕ್ಸ್‌, ಕಾನ್ಕರರ್ಸ್‌ ಓಟ

2ನೇ ಸ್ಥಾನಕ್ಕೇರಿದ ಫಾರ್ಮಿಡೇಬಲ್ಸ್‌, ಹೆಕ್ಸಗನ್‌
Published 10 ಜೂನ್ 2024, 16:43 IST
Last Updated 10 ಜೂನ್ 2024, 16:43 IST
ಅಕ್ಷರ ಗಾತ್ರ

ಮಂಗಳೂರು: ಮೇವರಿಕ್ಸ್‌ ಮತ್ತು ಏಸ್ ಕಾನ್ಕರರ್ಸ್‌ ತಂಡಗಳು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬ್ರಿಜ್ ಚಾಂಪಿಯನ್‌ಷಿಪ್‌ನ ತಂಡ ವಿಭಾಗದಲ್ಲಿ ಕ್ರಮವಾಗಿ ‘ಗೋಲ್ಡ್’ ಮತ್ತು ‘ಸಿಲ್ವರ್’ ವಿಭಾಗದಲ್ಲಿ ಎರಡನೇ ದಿನವಾದ ಸೋಮವಾರವೂ ಅಗ್ರ ಸ್ಥಾನವನ್ನು ಮುಂದುವರಿಸಿವೆ.

ಭಾರತ ಬ್ರಿಜ್ ಫೆಡರೇಷನ್‌ ಮತ್ತು ಕರ್ನಾಟಕ ರಾಜ್ಯ ಬ್ರಿಜ್ ಸಂಸ್ಥೆಗಳು ಕರಾವಳಿ ಬ್ರಿಜ್ ಸಂಸ್ಥೆಯ ಸಹಯೋಗದಲ್ಲಿ ಮೋತಿ ಮಹಲ್ ಹೋಟೆಲ್‌ನಲ್ಲಿ ಆಯೋಜಿಸಿರುವ ಚಾಂಪಿಯನ್‌ಷಿಪ್‌ನಲ್ಲಿ 8ನೇ ಸುತ್ತು ಮುಕ್ತಾಯಕ್ಕೆ ಈ ತಂಡಗಳು ಕ್ರಮವಾಗಿ 111.69 ಮತ್ತು 130.88 ಸ್ಕೋರು ಗಳಿಸಿವೆ.

ಭಾನುವಾರ 4 ಸುತ್ತುಗಳ ಮುಕ್ತಾಯಕ್ಕೆ ಮೇವರಿಕ್ಸ್‌ 62.38 ಮತ್ತು ಏಸ್ ಕಾನ್ಕರರ್ಸ್‌ 67.41 ಸ್ಕೋರು ಗಳಿಸಿ ಮೊದಲ ಸ್ಥಾನದಲ್ಲಿದ್ದವು. 28 ತಂಡಗಳನ್ನು ಒಳಗೊಂಡಿರುವ ಗೋಲ್ಡ್‌ ವಿಭಾಗದ 6ನೇ ಸ್ಥಾನದಲ್ಲಿದ್ದ ಫಾರ್ಮಿಡೇಬಲ್ ಸೋಮವಾರ ಅಮೋಘ ಸಾಮರ್ಥ್ಯ ತೋರಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ಎರಡನೇ ಸ್ಥಾನದಲ್ಲಿದ್ದ ಮೋನಿಕಾ ಜಾಜೂ ತಂಡ 5ನೇ ಸ್ಥಾನಕ್ಕೆ ಕುಸಿದಿದೆ.

24 ತಂಡಗಳ ಸಿಲ್ವರ್ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿದ್ದ ಅಲ್ಫಾ ಏಸ್ 4ನೇ ಸ್ಥಾನಕ್ಕೆ ಕುಸಿದಿದ್ದು 3ನೇ ಸ್ಥಾನದಲ್ಲಿದ್ದ ಹೆಕ್ಸಗನ್ ಎರಡನೇ ಸ್ಥಾನಕ್ಕೇರಿದೆ.

ಎರಡನೇ ದಿನ ಮೊದಲ 10 ಸ್ಥಾನ ಗಳಿಸಿದ ತಂಡಗಳು

ಗೋಲ್ಡ್ ವಿಭಾಗ: ಮೇವರಿಕ್ಸ್‌–1 (ಸ್ಕೋರು: 111.69), ಫಾರ್ಮಿಡೇಬಲ್ಸ್‌–2 (104.70), ಫೆನೆಸ್ತಾ–3 (103.55), ಸರ್ಲಾಫೈಬರ್ಸ್‌–4 (100.34), ಮೋನಿಕಾ ಜಾಜೂ–5 (91.54), ಡಿಯೊರಾಸ್ ಡೆಕ್‌ಹ್ಯಾಂಡ್ಸ್‌–6 (91.38), ಶ್ರೀ ರಾಧೇ–7 (89.94), ಶ್ರೀ ಸಿಮೆಂಟ್‌–8 (87.87), ಅರುಣ್ ಜೈನ್‌–9 (87.46), ಇಂಡಿಯನ್ ಚೈನ್ ಪ್ರೈವೆಟ್ ಲಿಮಿಟೆಡ್‌–10 (86.91).

ಸಿಲ್ವರ್ ವಿಭಾಗ: ಏಸ್ ಕಾನ್ಕರರ್ಸ್‌–1 (130.88), ಹೆಕ್ಸಗನ್‌–2 (115.96), ಯೂನಿಕ್ ಮಾಸ್ಟರ್ಸ್‌–3 (92.16), ಅಲ್ಫಾ ಏಸ್‌–4 (91.98), ಜೈ ಜಗನ್ನಾಥ್‌–5 (91.93), ಅನ್‌ಪ್ರೆಡಿಕ್ಟೇಬಲ್ಸ್–6 (91.62), ಧಂಪುರ್ ಲೆಗಸಿ–7 (90.69), ಜುತಿಕಾ–8 (90.33), ಹಾರ್ಮನಿ–9 (88.62), ಸೂಪರ್ ಲಕ್ಕಿ–10 (84.79).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT