ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿರೋಧಿ ಅಲೆ ಮೀರಿ ನಿಂತ ಮೋದಿ: ವಕೀಲೆ ಮೀರಾ ರಾಘವೇಂದ್ರ

ಮೋದಿ ಬ್ರಿಗೇಡ್ ಉದ್ಘಾಟನಾ ಸಮಾರಂಭದಲ್ಲಿ ವಕೀಲೆ ಮೀರಾ ರಾಘವೇಂದ್ರ ಅಭಿಮತ
Published 22 ಜನವರಿ 2024, 7:39 IST
Last Updated 22 ಜನವರಿ 2024, 7:39 IST
ಅಕ್ಷರ ಗಾತ್ರ

ಮಂಗಳೂರು: ‘ರಾಜಕೀಯದಲ್ಲಿ ಸತತ ಆಡಳಿತದಲ್ಲಿ ಇದ್ದವರ ವಿರುದ್ಧ ಅಲೆಯೊಂದು ಏಳುವ ವಿದ್ಯಮಾನ ಸಾಮಾನ್ಯ. ಆದರೆ, ನರೇಂದ್ರ ಮೋದಿ ಅವರು ಇಂಥ ಅಲೆಯನ್ನು ಮೀರಿ ನಿಂತವರು. ಆದ್ದರಿಂದ ಮುಂದಿನ ಬಾರಿಯೂ ಅವರು ಪ್ರಧಾನಿ ಆಗುತ್ತಾರೆ’ ಎಂದು ವಕೀಲೆ ಮೀರಾ ರಾಘವೇಂದ್ರ ಅಭಿಪ್ರಾಯಪಟ್ಟರು.

ನಗರದ ಟಿ.ವಿ.ರಮಣ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಭಾನುವಾರ ನಡೆದ ಮೋದಿ ಬ್ರಿಗೇಡ್‌ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಅವರು ಬಲಿಷ್ಠ ಭಾರತ ನಿರ್ಮಾಣಕ್ಕೆ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಕರ್ತವ್ಯ ಎಲ್ಲರದು ಎಂದರು.

4 ಬಾರಿ ಗುಜರಾತ್‌ ಮುಖ್ಯಮಂತ್ರಿಯಾಗಿ, 2 ಬಾರಿ ಪ್ರಧಾನಮಂತ್ರಿಯಾಗಿರುವ ಮೋದಿ ಅವರಿಗೆ ಬೆಂಬಲ ಹಾಗೂ ಅಭಿಮಾನದ ಅಲೆ ಹೆಚ್ಚುತ್ತಲೇ ಇದೆ. ವಿದೇಶದಲ್ಲೂ ಅವರನ್ನು ಬೆಂಬಲಿಸುವವರು ಸಾವಿರಾರು ಮಂದಿ ಇದ್ದಾರೆ. ಆದರೆ ಭಾರತದಲ್ಲಿ ದೇಶದ್ರೋಹಿಗಳು ಮತ್ತು ಭಯೋತ್ಪಾದಕರು ಮೋದಿಯನ್ನು ವಿರೋಧಿಸುತ್ತಿದ್ದಾರೆ ಎಂದು ಮೀರಾ ಟೀಕಿಸಿದರು.

‘ಮೋದಿ ಅವರನ್ನು ಎದುರಿಸಲು ಐಎನ್‌ಡಿಐಎ ಎಂಬ ‘ದುಷ್ಟಕೂಟ’ ಸ್ಥಾಪಿಸಿಕೊಂಡಿದ್ದಾರೆ. ಮೋದಿ ದೊಡ್ಡ ಶಕ್ತಿಯಾಗಿರುವುದರಿಂದ ಅವರನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ. 10 ವರ್ಷಗಳಲ್ಲಿ ಅವರು ದೇಶಕ್ಕೆ ನೀಡಿರುವ ಕೊಡುಗೆ ಅಪಾರ. ಅವರಿಂದಾಗಿ ದೇಶದ ಡಿಜಿಟಲ್ ತಂತ್ರಜ್ಞಾನಕ್ಕೆ ವಿಶ್ವದಲ್ಲಿ 2ನೇ ಸ್ಥಾನ ಪ್ರಾಪ್ತಿಯಾಗಿದೆ. ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ಶೇಕಡ 11ಕ್ಕೆ ಇಳಿದಿದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪೂಜಾ ಪೈ, ಉಪ ಮೇಯರ್ ಸುನೀತಾ, ಮೋದಿ ಬ್ರಿಗೇಡ್‌ ಗೌರವಾಧ್ಯಕ್ಷ ದಿನೇಶ್ ಕೆ.ಉರ್ವ, ಅಧ್ಯಕ್ಷ ಪದ್ಮರಾಜ್ ಲೋಹಿತ್‌ನಗರ ಇದ್ದರು. ಮೋದಿ ಬ್ರಿಗೇಡ್‌ ಪ್ರಧಾನ ಕಾರ್ಯದರ್ಶಿ ರವಿ ಕಾವೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿವಪ್ರಸಾದ್ ಸ್ವಾಗತಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT