ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘9 ಮೀಟರ್ ರಸ್ತೆ ದಾಟಲು ದೋಣಿ ವ್ಯವಸ್ಥೆ ಕಲ್ಪಿಸಿ’

Published 29 ಜೂನ್ 2024, 6:15 IST
Last Updated 29 ಜೂನ್ 2024, 6:15 IST
ಅಕ್ಷರ ಗಾತ್ರ

ಉಳ್ಳಾಲ: ಧಾರಾಕಾರ ಮಳೆಗೆ ವಾರ್ಡ್‌ನ ಬಂಡಿಕೊಟ್ಯ ಮತ್ತು ಮಿಲ್ಲತ್ ನಗರದಲ್ಲಿ ಮಳೆ ನೀರಿನಿಂದ ರಸ್ತೆಯು ನದಿಯಂತಾಗಿದೆ. ಶಾಲಾ ಮಕ್ಕಳಿಗೆ, ವೃದ್ಧರಿಗೆ ರಸ್ತೆಯಲ್ಲಿ ನಡೆದಾಡಲು ಸಾಧ್ಯವಾಗುತ್ತಿಲ್ಲ. ಉಳ್ಳಾಲ ನಗರಸಭೆಯು 9 ಮೀಟರ್ ಉದ್ದದ ರಸ್ತೆ ದಾಟಲು ದೋಣಿಯ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಕಲ್ಪಿಸಬೇಕು’ ಎಂದು ಉಳ್ಳಾಲ ನಗರಸಭೆ ವಾರ್ಡ್‌ 11ರ ಸದಸ್ಯೆ ಕಮರುನ್ನೀಸಾ ನಿಝಾಮ್ ಅವರು ಮುಖ್ಯಾಧಿಕಾರಿ ವಾಣಿ ಆಳ್ವ ಅವರಿಗೆ ಮನವಿ ಸಲ್ಲಿಸಿದರು.

ಮಳೆಯಿಂದಾಗಿ ಬಂಡಿಕೊಟ್ಯ - ಮಿಲ್ಲತ್ ನಗರ ಮುಖ್ಯ ರಸ್ತೆ ನೀರಿನಿಂದ ತುಂಬಿದೆ. ಈ ಬಗ್ಗೆ ಉಳ್ಳಾಲ ನಗರಸಭೆಗೆ ಮನವಿ ಸಲ್ಲಿಸಿದರೂ ನಿರ್ಲಕ್ಷ್ಯ ಮಾಡಲಾಗಿದೆ. ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿವೆ. ಸಾಂಕ್ರಾಮಿಕ ಕಾಯಿಲೆ ಬಾಧಿಸುವ ಸಾಧ್ಯತೆ ಇದ್ದು, 9 ಮೀಟರ್ ಉದ್ದದ ರಸ್ತೆಯಲ್ಲಿ ಮಳೆ ನೀರು ಹರಿದು ಹೋಗುವ ಚರಂಡಿ ನಿರ್ಮಿಸ ಬೇಕು. ಇಲ್ಲದಿದ್ದರೆ ರಸ್ತೆ ದಾಟಲು ದೋಣಿ ವ್ಯವಸ್ಥೆಯನ್ನು ತುರ್ತಾಗಿ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಬಂಡಿಕೊಟ್ಯ- ಮಿಲ್ಲತ್ ನಗರ ರಸ್ತೆಯಲ್ಲಿ ನೀರು ತುಂಬಿರುವುದು
ಬಂಡಿಕೊಟ್ಯ- ಮಿಲ್ಲತ್ ನಗರ ರಸ್ತೆಯಲ್ಲಿ ನೀರು ತುಂಬಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT