ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಕನಿಷ್ಠ ಆಮದು ಬೆಲೆ ಹೆಚ್ಚಳಕ್ಕೆ ಮನವಿ

ಕೇಂದ್ರ ಸಚಿವ ಜೋಶಿ ಭೇಟಿ ಮಾಡಿದ ನಿಯೋಗ
Last Updated 17 ಆಗಸ್ಟ್ 2022, 16:28 IST
ಅಕ್ಷರ ಗಾತ್ರ

ಮಂಗಳೂರು: ಅಡಿಕೆ ಕನಿಷ್ಠ ಆಮದು ಬೆಲೆ ಹೆಚ್ಚಳಕ್ಕೆ ವಿನಂತಿಸಿ, ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆಗಳ ಪ್ರಮುಖರು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಬುಧವಾರ ದೆಹಲಿಯಲ್ಲಿ ಭೇಟಿ ಮಾಡಿ ವಿನಂತಿಸಿದರು.

ಕೇಂದ್ರ ಸರ್ಕಾರವು 2017ರಲ್ಲಿ ಕನಿಷ್ಠ ಆಮದು ಬೆಲೆಯನ್ನು ಕೆ.ಜಿ.ಗೆ ₹ 251ಕ್ಕೆ ನಿಗದಿ ಪಡಿಸಿತ್ತು.
ಇದನ್ನು ಕೆ.ಜಿ.ಗೆ ₹ 360ಕ್ಕೆ ಹೆಚ್ಚಿಸುವಂತೆ, ಆಮದು ಅಡಿಕೆ ನಿಯಂತ್ರಿಸುವಂತೆ ಹಾಗೂ ಉತ್ತರ ಪ್ರದೇಶದ ಸರ್ಕಾರ ವಿಧಿಸಿರುವ ಮಂಡಿ ತೆರಿಗೆಗೆ
ವಿನಾಯಿತಿ ನೀಡುವಂತೆ ನಿಯೋಗ ಒತ್ತಾಯಿಸಿತು.

ಮಂಜಪ್ಪ ಹೊಸಬಾಳೆ ಹಾಗೂ ರಮೇಶ ವೈದ್ಯರ ನೇತೃತ್ವದ ನಿಯೋಗದಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ, ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ.ಕೃಷ್ಣ ಕುಮಾರ್, ಅಡಿಕೆ ಮಹಾಮಂಡಳದ ಅಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ, ತುಮ್ಕೋಸ್ ಅಧ್ಯಕ್ಷ ಆರ್.ಎಂ.ರವಿ, ರಾಜ್ಯ ಸಹಕಾರ ಭಾರತಿಯ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಮಡ್ತಿಲ, ಶಿರಸಿ ಟಿಎಸ್ಎಸ್ ನಿರ್ದೇಶಕ ಶಶಾಂಕ್ ಎಸ್. ಹೆಗಡೆ, ಮಹಾಮಂಡಳದ ನಿರ್ದೇಶಕ ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT