ಮಂಗಳೂರು: ಮಂಗಳೂರು ರಿಫೈನರ್ ಆ್ಯಂಡ್ ಪೆಟ್ರೊ ಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಕಚೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮದಿನ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ತಜ್ಞ ವೈದ್ಯ ಡಾ. ನಟೇಶ್ ಬಿ.ಎಚ್ ಮಾತನಾಡಿ, ಡಾ. ಅಂಬೇಡ್ಕರ್ ಅವರು ಸಮಾನತೆ, ಭ್ರಾತೃತ್ವದ ಸಂದೇಶ ಸಾರಿದವರು. ಅವರ ವಿಚಾರಧಾರೆ ಎಲ್ಲ ಕಾಲಕ್ಕೂ ಪ್ರಸ್ತುತ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಶ್ಯಾಮಪ್ರಸಾದ್ ಕಾಮತ್, ರಾಷ್ಟ್ರ ನಿರ್ಮಾಣಕ್ಕೆ ಅಂಬೇಡ್ಕರ್ ನೀಡಿರುವ ಕೊಡುಗೆಗಳನ್ನು ಸ್ಮರಿಸಿದರು.

ಕೊರಗ ಸಮುದಾಯದ ಪ್ರಥಮ ಮಹಿಳಾ ಪಿ.ಎಚ್ಡಿ ಪದವೀಧರೆಯಾಗಿರುವ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಸಬಿತಾ ಕೊರಗ ಮತ್ತು ಮಂಗಳೂರು ವಿ.ವಿ ಪ್ರಾಧ್ಯಾಪಕ ದಿನಕರ ಅವರನ್ನು ಸನ್ಮಾನಿಸಲಾಯಿತು.

ರಿಫೈನರಿ ನಿರ್ದೇಶಕ ನಂದಕುಮಾರ್ ಪಿಳ್ಳೈ, ಹಣಕಾಸು ವಿಭಾಗದ ನಿರ್ದೇಶಕ ದೇವೇಂದ್ರ ಕುಮಾರ್, ಅಧಿಕಾರಿಗಳಾದ ಬಿಎಚ್ವಿ ಪ್ರಸಾದ್, ಬಿ. ಸುದರ್ಶನ್ ಹಾಜರಿದ್ದರು. ಸಂದೇಶ್ ಜೆ. ಕುಟಿನ್ಹೊ ಸ್ವಾಗತಿಸಿದರು. ಮನೋಜ್ ಕುಮಾರ್ ವಂದಿಸಿದರು. ಎಂಆರ್ಪಿಎಲ್ ಸಿಬ್ಬಂದಿ ‘ಜೈ ಭೀಮ್’ ಕಿರುನಾಟಕ ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.