ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಎಂಆರ್‌ಪಿಎಲ್‌ಗೆ ಸಿಎಂಡಿ ತ್ರಿದಿನ ಭೇಟಿ

ಕಾರ್ಯಕ್ಷಮತೆ, ವಿಸ್ತರಣಾ ಕ್ಷೇತ್ರಗಳ ಪರಿವೀಕ್ಷಣೆ ನಡೆಸಿದ ಸುಭಾಷ್ ಕುಮಾರ್‌
Last Updated 19 ಅಕ್ಟೋಬರ್ 2021, 4:20 IST
ಅಕ್ಷರ ಗಾತ್ರ

ಮಂಗಳೂರು:ಒಎನ್‌ಜಿಸಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಸುಭಾಷ್ ಕುಮಾರ್‌ ಅಕ್ಟೋಬರ್‌ 16ರಿಂದ 18ರವರೆಗೆ ಮಂಗಳೂರು ತೈಲಾಗಾರ –ಎಂಆರ್‌ಪಿಎಲ್‌ ಮತ್ತು ಸಹಕಂಪನಿಗಳಿಗೆ ಭೇಟಿ ನೀಡಿ, ಕಾರ್ಯಕ್ಷಮತೆ ವೃದ್ಧಿ, ವಿಸ್ತರಣಾ ಕ್ಷೇತ್ರಗಳ ಬಗ್ಗೆ ಪರಿವೀಕ್ಷಣೆ ನಡೆಸಿದರು.

ತೈಲಾಗಾರದ ಪ್ರಸಕ್ತ ಕಾರ್ಯಕ್ಷಮತೆಯ ಪರಿಶೀಲನೆ ನಡೆಸಿದ ಅವರು, ಭಾವಿ ಯೋಜನೆಗಳು, ಕಾರ್ಯ ವಿಸ್ತರಣೆಯ ಕ್ಷೇತ್ರಗಳು ಹಾಗೂ ಗುರಿಮೀರಿದ ಸಾಧನೆಗಾಗಿ ಕೈಗೊಳ್ಳಬಹುದಾದ ಕಾರ್ಯಯೋಜನೆಗಳ ಬಗ್ಗೆ ಸ್ಥಳೀಯ ಮುಖ್ಯಸ್ಥರು, ನಿರ್ದೇಶಕ ಮಂಡಳಿ ಪ್ರಮುಖರ ಜತೆ ಆನ್‌ಲೈನ್‌, ಆಫ್‌ಲೈನ್‌ ವಿಧಾನಗಳಲ್ಲಿ ಚರ್ಚಿಸಿದರು. ಸೂಚನೆಗಳನ್ನು ನೀಡಿದರು.

ಎಂಆರ್‌ಪಿಎಲ್‌ ನಿರ್ದೇಶಕ ಮಂಡಳಿ ಅಧ್ಯಕ್ಷರೂ ಆಗಿರುವ ಸುಭಾಷ್‌ ಕುಮಾರ್‌, ತಣ್ಣೀರುಬಾವಿ ಬಳಿ ಎಂಆರ್‌ಪಿಎಲ್‌ ನಿರ್ಮಿಸುತ್ತಿರುವ ಹೊಸ ಘಟಕ, ತೈಲಾಗಾರದ ಆವರಣದಲ್ಲೇ ಇರುವ ಎಫ್‌ಜಿಟಿಯು, ಒಎಂಪಿಎಲ್‌, ಐಎಸ್‌ಪಿಆರ್‌ಎಲ್‌ ಘಟಕಗಳಿಗೆ ಭೇಟಿ ನೀಡಿದರು.

ನಿರ್ದೇಶಕ ಮಂಡಳಿಯ ಜಂಟಿ ಕಾರ್ಯದರ್ಶಿ(ಜನರಲ್‌) ರೋಹಿತ್‌ ಮಾಥುರ್‌, ಸ್ವತಂತ್ರ ನಿರ್ದೇಶಕ ಆರ್‌ಟಿ ಅಗರ್‌ವಾಲ್‌ ಸಿಎಂಡಿ ಜತೆಯಲ್ಲಿದ್ದರು. ಎಂಆರ್‌ಪಿಎಲ್‌ ಎಂಡಿ ಎಂ. ವೆಂಕಟೇಶ್‌, ಐಟಿಎಸ್‌ಸಿವಿಒ ರಾಜೇಶ್‌ ಕುಶ್ವಾ, ರಿಫೈನರಿ ನಿರ್ದೇಶಕ ಸಂಜೀವ ವರ್ಮ, ಇಡಿ ಎಳಂಗೊ ಎಂ, ಎಡಿ ಪ್ರಾಜೆಕ್ಸ್‌ ಬಿಎಚ್‌ವಿ ಪ್ರಸಾದ್‌, ಒಎನ್‌ಜಿಸಿಯ ವಿಶಾಲ್‌ ಶರ್ಮ, ಹಿರಿಯ ಅಧಿಕಾರಿಗಳು ಇದ್ದರು
ಎಂದು ಎಂಆರ್‌ಪಿಎಲ್‌ ಕಾರ್ಪೊರೇಟ್‌ ಜಿಎಂ ಡಾ. ರುಡಾಲ್ಫ್‌ ನೊರೊನ್ಹಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT