ಭಾನುವಾರ, ಆಗಸ್ಟ್ 1, 2021
20 °C
ಮೂಲ್ಕಿ ಪೇಟೆಯಲ್ಲಿ ಹಲಸಿನ ಹಣ್ಣಿನ ಘಮ

ಲಾಕ್‌ಡೌನ್‌ ಸಡಿಲಿಕೆ, ಮುಕ್ತ ವ್ಯವಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಲ್ಕಿ: ಜಿಲ್ಲಾಡಳಿತ ಲಾಕ್‌ಡೌನ್ ಸಡಿಲಿಕೆ ಮಾಡಿ, ಎಲ್ಲ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿರುವ ಕಾರಣ ಬುಧವಾರ ಇಲ್ಲಿ ಬಟ್ಟೆ, ಸೆಲೂನ್, ಚಪ್ಪಲಿ, ಮುದ್ರಣ, ಮೊಬೈಲ್ ಅಂಗಡಿಗಳು, ಹೋಟೆಲ್‌ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಸ್ವಚ್ಛಗೊಳಿಸಿ, ಗ್ರಾಹಕರನ್ನು ಸ್ವಾಗತಿಸಲು ಅಣಿಯಾದರು.

ಎರಡು ತಿಂಗಳುಗಳಿಂದ ಬಂದ್ ಇದ್ದ ಸುಮಾರು 200ರಿಂದ 250 ಅಂಗಡಿಗಳಲ್ಲಿ ಬಹುತೇಕವನ್ನು ಬುಧವಾರ ತೆರೆಯಲಾಯಿತು. ಕೋವಿಡ್ ನಿಯಮ ಪಾಲನೆ ಮತ್ತು ಮಾಸ್ಕ್ ಧರಿಸಲು ಗ್ರಾಹಕರಿಗೆ ತಿಳಿಸಲಾಯಿತು. ಗ್ರಾಮ ಪಂಚಾಯಿತಿ ಕಾರ್ಯಪಡೆ, ಅಧಿಕಾರಿಗಳು ಹಾಗೂ ಪೊಲೀಸರು ವಿಶೇಷ ಬೀಟ್ ನಡೆಸಿದರು. ವಾಹನ ಹಾಗೂ ಜನ ಸಂಚಾರ ಹೆಚ್ಚಾಗಿತ್ತು. ಉಳಿದಂತೆ ಮೀನು, ತರಕಾರಿ, ಕೋಳಿ  ಮಾರಾಟ ಎಂದಿನಂತೆ ನಡೆಯಿತು.

ಕಿನ್ನಿಗೋಳಿ, ಕಾರ್ನಾಡು, ಪಕ್ಷಿಕೆರೆ, ಹಳೆಯಂಗಡಿಯ ಜಂಕ್ಷನ್‌ನಲ್ಲಿ ಸಿಹಿಯಾದ ತಾಜಾ ಹಲಸಿನ ಹಣ್ಣುಗಳ ಮಾರಾಟ ಜೋರಾಗಿತ್ತು. ಹಳೆಯಂಗಡಿಯ ದೈವಾರಾಧಕ ವಾಮನ ಪೂಜಾರಿ ಅವರು ಪ್ರತಿವರ್ಷ ಈ ಸಮಯದಲ್ಲಿ ಪರಿಸರದಲ್ಲಿನ ಹಲಸಿನ ಹಣ್ಣುಗಳನ್ನು ಸಂಗ್ರಹಿಸಿ ತಂದು ಹಳೆಯಂಗಡಿ ಪೇಟೆಯಲ್ಲಿಟ್ಟು, ಗ್ರಾಹಕರಿಗೆ ತಲುಪಿಸುವಲ್ಲಿ ಸಹಕರಿಸುತ್ತಾರೆ. ಈ ಬಾರಿ ಪಕ್ಕದಲ್ಲಿಯೇ ಇರುವ ಪೊಲೀಸ್ ಚೆಕ್‌ಪೋಸ್ಟ್ ಸಿಬ್ಬಂದಿಗೂ ಹಣ್ಣಿನ ರುಚಿ ಹಚ್ಚಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು