ಬಯಲಾಯ್ತು ಕೊಲೆ ರಹಸ್ಯ: ಸಾಲ ಮರಳಿಸುವಂತೆ ಕೇಳಿದ್ದಕ್ಕೆ ಹತ್ಯೆ

ಬುಧವಾರ, ಮೇ 22, 2019
34 °C
ಪ್ರಕರಣ ಭೇದಿಸಿದ ಪೊಲೀಸರು

ಬಯಲಾಯ್ತು ಕೊಲೆ ರಹಸ್ಯ: ಸಾಲ ಮರಳಿಸುವಂತೆ ಕೇಳಿದ್ದಕ್ಕೆ ಹತ್ಯೆ

Published:
Updated:

ಮಂಗಳೂರು: ಭಾನುವಾರ ನಗರದ ಪತ್ತೆಯಾಗಿದ್ದ ಮಹಿಳೆಯ ಭೀಕರ ಕೊಲೆ ಪ್ರಕರಣ ಭೇದಿಸುವಲ್ಲಿ ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ.

ಶ್ರೀಮತಿ‌ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಟರ್ ಪೇಟೆಯ ಜೋನಸ್ ಸ್ಯಾಮ್ಸನ್ ಹಾಗೂ ಆತನ ಪತ್ನಿ ವಿಕ್ಟೋರಿಯಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ಭೀತಿಯಿಂದ ಜೋನಸ್ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಫಾದರ್‌ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ... ಮಂಗಳೂರು: ದುಷ್ಕರ್ಮಿಗಳು ಕತ್ತರಿಸಿ ತಂದು ಎಸೆದಿರುವ ಮಹಿಳೆಯ ರುಂಡ, ಮುಂಡ ಪತ್ತೆ

ಘಟನೆ ವಿವರ: ಆರೋಪಿ ಜೋನಸ್, ಶ್ರೀಮತಿ‌ ಶೆಟ್ಟಿ ಅವರಿಂದ ₹1ಲಕ್ಷ ಸಾಲ ಪಡೆದಿದ್ದ. ಅದರಲ್ಲಿ‌ ಇನ್ನೂ ₹60 ಸಾವಿರ ಕೊಡಬೇಕಿತ್ತು.
ಶನಿವಾರ ಶ್ರೀಮತಿ‌ ಶೆಟ್ಟಿ‌ ಅವರು ಜೋನಸ್ ಮನೆಗೆ ತೆರಳಿ ಹಣ ಕೊಡುವಂತೆ‌ ಕೇಳಿದ್ದರು. ಆದರೆ, ಹಣ ಹಿಂದಿರುಗಿಸಲು ಆಗದ ಜೋನಸ್, ಶ್ರೀಮತಿ‌ ಶೆಟ್ಟಿಯನ್ನು ಮನೆಯಲ್ಲಿಯೇ ಹೊಡೆದು ಕೊಲೆ ಮಾಡಿದ್ದ. ಇಡೀ ದಿನ ಶವ ಆತನ ಮನೆಯಲ್ಲಿಯೇ ಇತ್ತು. ರಾತ್ರಿ ಶವವನ್ನು ತುಂಡರಿಸಿ, ನಗರದ ಬೇರೆ ಬೇರೆ ಭಾಗಗಳಲ್ಲಿ ಹಾಕಿದ್ದ.

ಇದೀಗ ಕೃತ್ಯಕ್ಕೆ ಜೋನಸ್ ಬಳಸಿದ್ದ ದ್ವಿಚಕ್ರ‌ವಾಹನ ಹಾಗೂ ಕೊಲೆಯಾದ ಶ್ರೀಮತಿ‌ ಶೆಟ್ಟಿ‌ ಮೈಮೇಲಿದ್ದ ಚಿನ್ನದ‌ ಸರ ಹಾಗೂ ಉಂಗುರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸಂದೀಪ್‌ ಪಾಟೀಲ ತಿಳಿಸಿದರು.

ಜೋನಸ್ ಪತ್ನಿ ವಿಕ್ಟೋರಿಯಾ ಕೂಡ ಕೊಲೆಯಾದ ಸಂದರ್ಭದಲ್ಲಿ‌ ಮನೆಯಲ್ಲಿಯೇ ಇದ್ದು, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದರು.

ಇದನ್ನೂ ಓದಿ... ಮಹಿಳೆಯ ಕೊಲೆ: ಹಲವರು ವಶಕ್ಕೆ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 7

  Sad
 • 1

  Frustrated
 • 13

  Angry

Comments:

0 comments

Write the first review for this !