ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಸ್ತೆಯಲ್ಲೇ ನಮಾಜ್: ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ವಿಡಿಯೊ

Published 28 ಮೇ 2024, 5:37 IST
Last Updated 28 ಮೇ 2024, 5:37 IST
ಅಕ್ಷರ ಗಾತ್ರ

ಮಂಗಳೂರು: ನಗರದ ಕಂಕನಾಡಿಯ ಬಳಿ ಮಸೀದಿ ಪಕ್ಕದ ಒಳರಸ್ತೆಯಲ್ಲೇ ನಮಾಜ್ ನಡೆಸಲಾಗಿದೆ ಎನ್ನಲಾದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ. 

‘ಈ ಘಟನೆ ಯಾವಾಗ ನಡೆದಿದೆ ಎಂಬುದು ಗೊತ್ತಿಲ್ಲ. ವಿಡಿಯೊದಲ್ಲಿರುವ ದೃಶ್ಯಗಳು ಕಂಕನಾಡಿ ಬಳಿಯ ಮಸೀದಿ ಪಕ್ಕದ ರಸ್ತೆಯನ್ನೇ ಹೋಲುತ್ತಿವೆ. ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ’ ಎಂದು ಪೊಲಿಸ್‌ ಮೂಲಗಳು ತಿಳಿಸಿವೆ.

ರಸ್ತೆಯಲ್ಲಿ ನಮಾಜ್‌ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾದ ಬಗ್ಗೆ ಯಾರಿಂದಲೂ ದೂರು ಬಂದಿಲ್ಲ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶುಕ್ರವಾರದ ನಮಾಜ್‌ ವೇಳೆ ಕಂಕನಾಡಿಯ ಮಸೀದಿಯ ಒಳಾಂಗಣ ಭರ್ತಿಯಾಗುತ್ತದೆ. ಇಲ್ಲಿನವರು ಕಾದು ಮಸೀದಿಯಲ್ಲೇ ನಮಾಜ್‌ ನೆರವೇರಿಸುತ್ತಾರೆ. ಇಲ್ಲಿಯೇ ಸಮೀಪದಲ್ಲಿ ಆಸ್ಪತ್ರೆ ಇದೆ. ಅಲ್ಲಿ ಚಿಕಿತ್ಸೆಗೆ ದಾಖಲಾಗುವ ಪರವೂರಿನ ರೋಗಿಗಳ ಸಂಬಂಧಿಕರೂ ಈ ಮಸೀದಿಗೆ ನಮಾಜ್‌ಗಾಗಿ ಬರುತ್ತಾರೆ. ಅವರು ರಸ್ತೆಯಲ್ಲೇ ನಮಾಜ್‌ ಮಾಡಿರುವ ಸಾಧ್ಯತೆ ಇದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT