ಮಂಗಳೂರು: ಖಂಡಿಗೆ ಹಾಗೂ ನಂದಿನಿ ನದಿ ಮಾಲಿನ್ಯಕ್ಕೆ ಪರೋಕ್ಷ ಕಾರಣರಾಗಿರುವ ಆರೋಪದ ಮೇಲೆ ಕರ್ನಾಟಕ ಲೋಕಾಯುಕ್ತವು 9 ಮಂದಿ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಪ್ರಕರಣದ ವಿಚಾರಣೆ ವೇಳೆ ಅಧಿಕಾರಿಗಳು ನೀಡಿರುವ ಉತ್ತರದ ಬಗ್ಗೆ ಲೋಕಾಯುಕ್ತವು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮುಂದಿನ ವಿಚಾರಣೆ ಒಳಗಾಗಿ ಕಠಿಣ ಕ್ರಮವಹಿಸಲು ಸೂಚಿಸಿದೆ.

ಎಂಜಿನಿಯರ್ಗಳಾದ ಜ್ಞಾನೇಶ್, ಕಾರ್ತಿಕ್ ಶೆಟ್ಟಿ, ಯತೀಶ್ ಎಂ.ಎಸ್, ಮಂಗಳೂರು ಉಪವಿಭಾಗಾಧಿಕಾರಿ, ಸಹಾಯಕ ಪೊಲೀಸ್ ಕಮಿಷನರ್ ಈ ಐವರಿಗೆ ನೋಟಿಸ್ ನೀಡಲು ನ.18ರಂದು ನಡೆದ ವಿಚಾರಣೆಯಲ್ಲಿ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ 20ಕ್ಕೆ ನಿಗದಿಪಡಿಸಲಾಗಿದೆ.

ನಂದಿನಿ, ಖಂಡಿಗೆ ನದಿ ಹಾಗೂ ಉಪನದಿಗಳು ಕಲುಷಿತಗೊಂಡಿದ್ದರೂ ಅದರ ಬಗ್ಗೆ ಕ್ರಮ ಕೈಗೊಳ್ಳದ ಆರೋಪದ ಮೇಲೆ ಒಂಬತ್ತು ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕರ್ನಾಟಕ ಲೋಕಾಯುಕ್ತವು ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 7(2)ರ ಅಡಿಯಲ್ಲಿ ಮಾರ್ಚ್ 24ರಂದು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು.

ಮಾರ್ಚ್ 7 ಮತ್ತು 8ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಭೇಟಿ ನೀಡಿದ್ದ ವೇಳೆ, ಸುರತ್ಕಲ್ ಗ್ರಾಮದ ಮುಕ್ಕ ಶ್ರೀನಿವಾಸ ಕಾಲೇಜಿನ ಹಿಂಭಾಗದ ಹೊಳೆಗೆ ಮಣ್ಣು ತುಂಬಿಸಿ, ಒತ್ತುವರಿ ಮಾಡಿ, ಕಟ್ಟಡ ನಿರ್ಮಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆಯ ತ್ಯಾಜ್ಯ ನೀರು ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯ ಎಸ್ಟಿಪಿ ಘಟಕದ ಹೊಲಸು ನೀರನ್ನು ಖಂಡಿಗೆ ನದಿ ಹಾಗೂ ನಂದಿನಿ ನದಿಗೆ ಬಿಡುವುದರಿಂದ ಸ್ಥಳೀಯ ಜಲಮೂಲಗಳು ಕಲುಷಿತಗೊಂಡಿವೆ ಎಂದು ಸುಕೇಶ್ ಶೆಟ್ಟಿ ಎಂಬುವವರು ದೂರು ನೀಡಿದ್ದರು.

ನದಿಯಲ್ಲಿ ಮಾಲಿನ್ಯದಿಂದ ಸ್ಥಳೀಯ ದೈವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬಂದಿರುವ ಮೀನು ಹಿಡಿಯುವ ಉತ್ಸವ ನಡೆಯುತ್ತಿಲ್ಲ ಎಂದೂ ದೂರಿನಲ್ಲಿ ತಿಳಿಸಿದ್ದರು. ಇದನ್ನು ಪರಿಶೀಲಿಸಲು ಉಪಲೋಕಾಯುಕ್ತರು ಸ್ಥಳಕ್ಕೆ ಭೇಟಿ ನೀಡಿದ ನಂತರ, ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ವರದಿ ನೀಡುವಂತೆ ಮಂಗಳೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಹಾಗೂ ಉಪಾಧೀಕ್ಷಕರಿಗೆ ಸೂಚಿಸಿದ್ದರು.

ಲೋಕಾಯುಕ್ತ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ವರದಿಯನ್ನು ಕರ್ನಾಟಕ ಲೋಕಾಯುಕ್ತಕ್ಕೆ ಸಲ್ಲಿಸಿದ್ದಾರೆ.

‘ಶ್ರೀನಿವಾಸ ಕಾಲೇಜಿನ ಎಸ್ಟಿಪಿಯಿಂದ ಹಾಗೂ ಸುರತ್ಕಲ್ ಮಧ್ಯ ಗ್ರಾಮದ ಮಾಧವನಗರದಲ್ಲಿ ಇರುವ 16.5 ಎಂಎಲ್ಡಿ ಸಾಮರ್ಥ್ಯದ ಮಹಾನಗರ ಪಾಲಿಕೆಯ ಜಲತ್ಯಾಜ್ಯ ಘಟಕದಿಂದ ನೀರನ್ನು ಸಂಸ್ಕರಿಸಿದೆ ನೇರವಾಗಿ ನದಿಗೆ ಬಿಡುತ್ತಿರುವುದು ನದಿ ನೀರು ಕಲುಷಿತಗೊಳ್ಳಲು ಮುಖ್ಯ ಕಾರಣವಾಗಿದೆ. ಸುರತ್ಕಲ್ ಗ್ರಾಮದ ಸರ್ವೆ ಸಂಖ್ಯೆ 47/1ಎ1 ರಲ್ಲಿ 4 ಎಕ್ರೆ 11 ಸೆಂಟ್ಸ್ ವಿಸ್ತೀರ್ಣದ ಜಮೀನು ಸರ್ಕಾರಿ ಹೊಳೆ ಎಂದು ಪಹಣಿಯಲ್ಲಿ ದಾಖಲಾಗಿದೆ. ಸರ್ವೆ ಸಂಖ್ಯೆ 47/1ಎ1ಪಿ1 ಇಲ್ಲಿ 3.88 ಎಕರೆ ಜಾಗದಲ್ಲಿ ಶ್ರೀನಿವಾಸ ಕಾಲೇಜಿನವರು 23 ಸೆಂಟ್ಸ್ ಹೊಳೆ ಪ್ರದೇಶವನ್ನು ಒತ್ತುವರಿ ಮಾಡಿದ್ದಾರೆ ಎಂಬುದು ಕಂದಾಯ ಇಲಾಖೆಯ ಪರಿಶೀಲನೆ ವೇಳೆ ಕಂಡುಬಂದಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಒಟ್ಟು 31 ಪುಟಗಳ ಸುದೀರ್ಘ ವರದಿಯಲ್ಲಿ ಸ್ಥಳ ಪರಿಶೀಲನೆ, ಸ್ಥಳೀಯರ ಅಭಿಪ್ರಾಯ ಕ್ರೋಡೀಕರಣ ಉಲ್ಲೇಖಿಸಲಾಗಿದೆ.

ಖಂಡಿಗೆ ನದಿ, ನಂದಿನಿ ನದಿ ಹಾಗೂ ಉಪನದಿಗಳು ಕಲುಷಿತಗೊಂಡಿದ್ದರೂ, ಸೂಕ್ತ ಕ್ರಮ ಕೈಗೊಳ್ಳಲು ವಿಫಲರಾಗಿರುವ ಪಾಲಿಕೆ ಸುರತ್ಕಲ್ ವಲಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಲಿಂಗಪ್ಪ, ಸಹಾಯಕ ನಗರ ಯೋಜನಾಧಿಕಾರಿಗಳಾದ ಗುರುಪ್ರಸಾದ್, ಲಾವಣ್ಯ, ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜಕ ರಘು ಜಿ.ಆರ್, ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಪರಿಸರ ಅಧಿಕಾರಿ ಮಹೇಶ್ವರಿ ಸಿಂಗ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ.ಎಂ. ತಾಜುದ್ದೀನ್ ಉಬೈದ್, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರತಾಪ್, ಸಹಾಯಕ ಕೃಷಿ ನಿರ್ದೇಶಕಿ ವೀಣಾ, ಸುರತ್ಕಲ್ ಹೋಬಳಿ ಕಂದಾಯ ನಿರೀಕ್ಷಕ ಪ್ರಸಾದ್ ಎನ್.ಜಿ, ಸುರತ್ಕಲ್ ಇಡ್ಯಾ ಗ್ರಾಮ ಆಡಳಿತಾಧಿಕಾರಿ ಕೆ. ಸಂತೋಷ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಉಪಲೋಕಾಯುಕ್ತರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.