ಭಾನುವಾರ, ಆಗಸ್ಟ್ 1, 2021
20 °C

ಎನ್‌ಡಿಆರ್‌ಎಫ್ ತಂಡದಿಂದ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಪ್ಪಿನಂಗಡಿ: ಸಂಭಾವ್ಯ ನೆರೆ ಬಾಧಿತ ಉಪ್ಪಿನಂಗಡಿ ಪರಿಸರದ ಪ್ರದೇಶಗಳಿಗೆ ಎನ್‌ಡಿಆರ್‌ಎಫ್ ತಂಡ ಇಲ್ಲಿನ ಕಂದಾಯ ಇಲಾಖಾ ಅಧಿಕಾರಿಗಳೊಂದಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿತು.

ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿಯ ಸ್ನಾನಘಟ್ಟ, ಹಳೆಗೇಟು, ಪಂಜಳ, ಮಠ, ಬೊಳ್ಳಾರು, ಬಜತ್ತೂರು ಪರಿಸರದಲ್ಲಿನ ನೆರೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದ ತಂಡ ಸಂಭಾವ್ಯ ನೆರೆಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ರಕ್ಷಣಾ ಕಾರ್ಯಗಳ ಬಗ್ಗೆ ಅಧ್ಯಯನ ನಡೆಸಿತು. ಎನ್‌ಡಿಆರ್‌ಎಫ್ 10ನೇ ಬೆಟಾಲಿಯನ್ ವಿಜಯವಾಡ ಇನ್‌ಸ್ಪೆಕ್ಟರ್ ಆರ್.ಪಿ. ಚೌಧರಿ ನೇತೃತ್ವದ ಐದು ಮಂದಿಯ ತಂಡ, ಕಂದಾಯ ನಿರೀಕ್ಷಕ ವಿಜಯ ವಿಕ್ರಮ್, ಉಪ್ಪಿನಂಗಡಿ ಗ್ರಾಮಕರಣಿಕ ಹರೀಶ್, ನೆಕ್ಕಿಲಾಡಿ ಗ್ರಾಮ ಕರಣಿಕ ರಮಾನಂದ ಚಕ್ಕಾಡಿ, ಗೃಹ ರಕ್ಷಕ ದಳದ
ಪ್ರವಾಹ ರಕ್ಷಣಾ ತಂಡದ ಪ್ರಭಾರಿ ಘಟಕಾಧಿಕಾರಿ ದಿನೇಶ್, ವಸಂತ, ಸಮದ್, ಗ್ರಾಮ ಸಹಾಯಕ ಯತೀಶ್ ಜೊತೆಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು