ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೆಜ್ಜೆಗಿರಿ: ಧೂಮಾವತಿ ನೇಮೋತ್ಸವ

Published 27 ಫೆಬ್ರುವರಿ 2024, 15:40 IST
Last Updated 27 ಫೆಬ್ರುವರಿ 2024, 15:40 IST
ಅಕ್ಷರ ಗಾತ್ರ

ಪುತ್ತೂರು: ತಾಲ್ಲೂಕಿನ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ನಂದನಬಿತ್ತಿಲು ಕ್ಷೇತ್ರದಲ್ಲಿ ಮಂಗಳವಾರ ಕ್ಷೇತ್ರದ ಆದಿ ದೈವ ಧೂಮಾವತಿ ನೇಮೋತ್ಸವ ನಡೆಯಿತು.

ಕ್ಷೇತ್ರದಲ್ಲಿ ಬೆಳಿಗ್ಗೆ ಗಣಹೋಮ, ಗುರುಪೂಜೆ, ಶುದ್ಧಿಕಲಶ ನಡೆಯಿತು. ಬಳಿಕ ಧೂಮಾವತಿ ದೈವದ ನೇಮೋತ್ಸವ ಆರಂಭಗೊಂಡಿತು. ದೈವದ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಪ್ರಮುಖರಾದ ಪೀತಾಂಬರ ಹೆರಾಜೆ, ಶೈಲೇಂದ್ರ ವೈ.ಸುವರ್ಣ, ಜಯಂತ ನಡುಬೈಲು, ಶ್ರೀಧರ ಪೂಜಾರಿ, ರವಿಪೂಜಾರಿ ಚಿಲಿಂಬಿ, ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್, ಚಿತ್ತರಂಜನ್, ಹರೀಶ್ ಜಿ.ಅಮೀನ್, ಎನ್.ಟಿ.ಪೂಜಾರಿ ಮುಂಬೈ, ಜಯಾನಂದ ಪೂಜಾರಿ, ಚಂದ್ರಹಾಸ ಅಮೀನ್ ಗೋವಾ, ಪ್ರಶಾಂತ್ ಪೂಜಾರಿ ಮಸ್ಕತ್, ಹರೀಶ್ ಕೆ.ಪೂಜಾರಿ, ಸತೀಶ್‌ಕುಮಾರ್‌ ಕೆಡೆಂಜಿ, ಸಂಜೀವ ಪೂಜಾರಿ ಕೂರೇಲು, ಪ್ರೇಮ್‌ಸನಿಲ್‌ ಕನಕರಬೆಟ್ಟು, ಜಯರಾಮ ಪೂಜಾರಿ ಶಕ್ತಿನಗರ, ಪೃಥ್ವಿರಾಜ್ ಕಂಕನಾಡಿ, ಲೋಕೇಶ್ ಅಮೀನ್, ಶುಭಾ ರಾಜೇಂದ್ರ, ದಿನೇಶ್ ಅಂಚನ್, ಶಕುಂತಳಾ ಟಿ.ಶೆಟ್ಟಿ, ಸತ್ಯಜಿತ್ ಸುರತ್ಕಲ್, ಶೇಖರ್ ಪೂಜಾರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT