ಮಂಗಳೂರು: ‘ದಶಕಗಳ ಹಿಂದೆ ಇಲ್ಲೇ ಮೃತದೇಹಗಳನ್ನು ಹೂತಿದ್ದೆ’ ಎಂದು ಸಾಕ್ಷಿ ದೂರುದಾರ ಧರ್ಮಸ್ಥಳದ ಸ್ನಾನಘಟ್ಟದ ಬಳಿಯ ದಟ್ಟ ಕಾನನದಲ್ಲಿ ಕೆಲವು ಜಾಗಗಳನ್ನು ತೋರಿಸಿದ ಬಳಿಕ ನೇತ್ರಾವತಿ ತಪ್ಪಲು ಕುತೂಹಲದ ತಾಣವಾಗಿದೆ.

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತುಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ (ಸಂಖ್ಯೆ 39/2025 ) ಸಂಬಂಧಿಸಿದ ಈ ನಿಗೂಢ ತಾಣದ ರಹಸ್ಯ ತಿಳಿಯುವ ಕೌತುಕ ಸಾರ್ವಜನಿಕರಲ್ಲಿ ಮತ್ತಷ್ಟು ಹೆಚ್ಚಾಗಿದೆ.

ಈ ಪ್ರಕರಣದ ಸಾಕ್ಷಿ ದೂರುದಾರನ್ನು ಭದ್ರತಾ ಪಡೆಯ ಬೆಂಗಾವಲಿನೊಂದಿಗೆ ಸ್ನಾನಘಟ್ಟಕ್ಕೆ ಕರೆತಂದು ‘ಹೂತಿಡಲಾಗಿದೆ’ ಎನ್ನಲಾದ ಶವಗಳ ಅವಶೇಷಗಳಿರುವ ಜಾಗಗಳಿಗಾಗಿ ಸಿನಿಮೀಯ ರೀತಿಯಲ್ಲಿ ಸೋಮವಾರ ಶೋಧ ಕಾರ್ಯ ನಡೆಯಿತು. ದಟ್ಟ ಕಾಡಿನಲ್ಲಿ ಬಾನೆತ್ತರ ಬೆಳೆದ ಮರಗಳ ನಡುವೆ ಆವರಿಸಿದ್ದ ದಟ್ಟ ಪೊದೆಗಳ ನಡುವೆ ನಡೆದ ಹುಡುಕಾಟ ರೋಚಕವಾಗಿತ್ತು. ಎಸ್ಐಟಿ ಅಧಿಕಾರಿಗಳ ತಂಡವು ದಾರಿಯೇ ಇಲ್ಲದ ಕಾಡಿನಲ್ಲಿ ಗಿಡ ಗಂಟಿಗಳನ್ನು ಕತ್ತರಿಸಿ ದಾರಿ ಮಾಡಿಕೊಂಡು ಸಾಗಬೇಕಾಯಿತು. ನಡುನಡುವೆ ಬೋರ್ಗರೆದ ಮಳೆ ಈ ಹುಡುಕಾಟವನ್ನು ಮತ್ತಷ್ಟು ಕ್ಲಿಷ್ಟಗೊಳಿಸಿತು. ಒಂದೆಡೆ ಸೊಳ್ಳೆ ಕಾಟ, ಇನ್ನೊಂದೆಡೆ ಇಂಬಳಗಳ ಕಾಟವನ್ನು ಸಹಿಸಿಕೊಂಡು ಅವರು ಮುಸುಕು ಧಾರಿ ವ್ಯಕ್ತಿಯ ಜೊತೆ ಕಲ್ಲು ಮುಳ್ಳುಗಳ ನಡುವೆ ಹೆಜ್ಜೆ ಹಾಕಿದರು. ಆತ ಒಂದೊಂದೇ ಜಾಗಗಳನ್ನು ತೋರಿಸುತ್ತಾ ಸಾಗಿದಂತೆಯೂ ಅವಕ್ಕಾಗುವ ಪರಿ ವಿಶೇಷ ತನಿಖಾ ತಂಡದ (ಎಸ್ಐಟಿ) ಸಿಬ್ಬಂದಿಯದಾಗಿತ್ತು.

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪ್ರದೇಶಕ್ಕೆ ಪೊಲೀಸರು ಈ ಪ್ರಕರಣದ ಸಾಕ್ಷಿ ದೂರುದಾರನನ್ನು ಸೋಮವಾರ ಕರೆತರುವಾಗ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಅಲ್ಲಿ ಸೇರಿದ್ದರು. ಮುಸುಕು ಹಾಕಿದ್ದ ಸಾಕ್ಷಿ ದೂರುದಾರನ್ನು ಪೊಲೀಸರು ಸ್ನಾನಘಟ್ಟದ ಬಳಿಯಿಂದ ಕಾಡಿನೊಳಗೆ ಕರೆದೊಯ್ದ ದೃಶ್ಯವನ್ನು ಅವರು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದರು.

ದಟ್ಟ ಕಾನನದಲ್ಲಿ ಬಾನೆತ್ತರಕ್ಕೆ ಬೆಳೆದ ಮರಗಳ ನಡುವೆ ಮೃತದೇಹಗಳನ್ನು ಹೂತು ಹಾಕಲಾದ ಜಾಗಗಳಿಗಾಗಿ ಹುಡುಕಾಟ ಒಂದೆಡೆ ನಡೆಯುತ್ತಿದ್ದರೆ, ಸ್ನಾನ ಘಟ್ಟದ ಬಳಿ ಸೇರಿದ ಸಾರ್ವಜನಿಕರು ಈ ಪ್ರಕರಣದ ಕುರಿತು ಗಹನ ಚರ್ಚೆಯಲ್ಲಿ ಮಗ್ನರಾಗಿದ್ದರು. ಒಬ್ಬೊಬ್ಬರದೂ ಒಂದೊಂದು ವಿಶ್ಲೇಷಣೆ. ಈ ಸಾಕ್ಷಿ ದೂರುದಾರ ವ್ಯಕ್ತಿ ಯಾರಾಗಿರಬಹುದು ಎಂಬ ಚರ್ಚೆಯಲ್ಲಿ ಕೆಲವರು ತೊಡಗಿದ್ದರು. ಒಬ್ಬನೇ ಇಷ್ಟೊಂದು ಮೃತದೇಹ ಹೂತು ಹಾಕಲು ಸಾಧ್ಯವೇ, ಇಷ್ಟು ದಟ್ಟವಾದ ಕಾಡಿನ ಒಳಗೆ ಮೃತದೇಹಗಳನ್ನು ಒಯ್ದಿದ್ದಾದರೂ ಹೇಗೆ? ನಿಜಕ್ಕೂ ಅಲ್ಲಿ ಮೃತದೇಹಗಳ ಅವಶೇಷಗಳನ್ನುಹೊರ ತೆಗೆಯಲು ಸಾಧ್ಯವೇ? ಎಂಬ ಧಾಟಿಯಲ್ಲಿ ಇನ್ನು ಕೆಲವರು ಚರ್ಚಿಸಿದರು. ಕೆಲವರು ಸಾಕ್ಷಿ ದೂರುದಾರನ್ನು ಕಾಡಿನೊಳಗೆ ಕರೆದೊಯ್ಯುವ ದೃಶ್ಯಗಳನ್ನು ಸೆರೆ ಹಿಡಿಯುವುದರಲ್ಲಿ ಮಗ್ನರಾಗಿದ್ದರು.

ಸಾಕ್ಷಿ ದೂರುದಾರ ಇಲ್ಲಿನ ರಾಜ್ಯ ಹೆದ್ದಾರಿ ಪಕ್ಕದ ಕಾಡಿನಲ್ಲಿ ಒಂದೊಂದೇ ಜಾಗವನ್ನು ತೋರಿಸುತ್ತಿದ್ದಾಗ ಆ ಹೆದ್ದಾರಿ ಮೂಲಕ ಹಾದು ಬಂದವರೂ ಕುತೂಹಲದಿಂದ ಅದರ ಮಾಹಿತಿ ಪಡೆಯಲು ಯತ್ನಿಸಿದರು. ಈ ವೇಳೆ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತವು.

ಕೆಲವರಂತೂ ಬೆಳಿಗ್ಗೆಯಿಂದ ಸಂಜೆವರೆಗೂ ಈ ಜಾಗದಲ್ಲೇ ಉಳಿದುಕೊಂಡು ಎಸ್ಐಟಿ ಶೋಧ ಕಾರ್ಯಾಚರಣೆಯನ್ನು ವೀಕ್ಷಿಸಿದರು.

ನೇತ್ರಾವತಿ ತೀರ್ಥಸ್ನಾನಕ್ಕಾಗಿ ಸ್ನಾನಘಟ್ಟದಲ್ಲಿ ಬಂದಿದ್ದವರನ್ನು ಪೊಲೀಸರು ಹೊರಗೆ ಕಳುಹಿಸಿದರು. ಹಾಗಾಗಿ ಕೆಲವು ಭಕ್ತರು ನಿರಾಸೆಯಿಂದ ಮರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.