ಮಂಗಳವಾರ, ಮೇ 11, 2021
24 °C

ಎ.ಜೆ. ಆಸ್ಪತ್ರೆಯಲ್ಲಿ ಅಯೋಡಿನ್ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಇಲ್ಲಿನ ಎ.ಜೆ. ಆಸ್ಪತ್ರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಅತ್ಯಾಧುನಿಕ ಅಯೋಡಿನ್ (ನ್ಯೂಕ್ಲಿಯರ್ ಮೆಡಿಸಿನ್) ಚಿಕಿತ್ಸಾ ವಿಭಾಗ ಪ್ರಾರಂಭವಾಗಲಿದೆ. ಜಿಲ್ಲೆ, ಇತರ ಜಿಲ್ಲೆಗಳು, ಉತ್ತರ ಕೇರಳದ ಕ್ಯಾನ್ಸರ್ ರೋಗಿಗಳ ಈ ಚಿಕಿತ್ಸೆಗೆ ಇದು ಸಹಕಾರಿಯಾಗಲಿದೆ.

ರೇಡಿಯೊ ಅಯೋಡಿನ್ ಥೆರಪಿ ಸೌಲಭ್ಯವು ಮಂಗಳೂರಿನಲ್ಲಿ ಲಭ್ಯವಿರಲಿಲ್ಲ ಮತ್ತು ರೋಗಿಗಳು ಈ ಚಿಕಿತ್ಸೆಯನ್ನು ಪಡೆಯಲು ಇತರ ಜಿಲ್ಲೆಗಳು ಅಥವಾ ನಗರಗಳಿಗೆ ಹೋಗಬೇಕಾಗಿತ್ತು. 

ನ್ಯೂಕ್ಲಿಯರ್ ಮೆಡಿಸಿನ್ ಥೆರಪಿ ಪ್ರಪಂಚದಾದ್ಯಂತ ವೇಗವಾಗಿ ಬೆಳೆಯುತ್ತಿರುವ ವಿಶೇಷ ಚಿಕಿತ್ಸೆ. ರೇಡಿಯೊ ಅಯೋಡಿನ್ ಥೆರಪಿ ದಶಕಗಳಿಂದ ಥೈರಾಯ್ಡ್ ಕ್ಯಾನ್ಸರ್ ರೋಗಿಗಳನ್ನು ಗುಣಪಡಿಸುವಲ್ಲಿ ಜನಪ್ರಿಯವಾಗಿದೆ. ಥೈರಾಯ್ಡ್ ಕ್ಯಾನ್ಸರ್ ಅನ್ನು ಹೊರತುಪಡಿಸಿ, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ನ್ಯೂರೋ ಎಂಡೋಕ್ರೈನ್ ಗಡ್ಡೆಗಳಂತಹ ಇತರ ಕ್ಯಾನ್ಸರ್ ರೋಗಿಗಳಿಗೆ ಸಹ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದೆ.

ಥೈರಾಯ್ಡ್ ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚಿ, ರೇಡಿಯೊ- ಅಯೋಡಿನ್‌ನೊಂದಿಗೆ ಚಿಕಿತ್ಸೆ ನೀಡಿದರೆ ರೋಗಿ ಗುಣಮುಖನಾಗುವ ಸಾಧ್ಯತೆ ಹೆಚ್ಚಿರುತ್ತದೆ. ಚಿಕಿತ್ಸೆಯ ನಂತರ ರೋಗಿಗಳು ವಿಶೇಷ ಚಿಕಿತ್ಸಾ ಕೊಠಡಿಗಳಲ್ಲಿ ಇರಬೇಕಾಗುತ್ತದೆ. ಅವರನ್ನು ಪರಿಣಿತ ವಿಕಿರಣ ಸುರಕ್ಷತಾ ಅಧಿಕಾರಿ ಸೂಕ್ಷ್ಮವಾಗಿ ಗಮನಿಸುತ್ತಾರೆ ಮತ್ತು ಭಾರತ ಸರ್ಕಾರದ ಪರಮಾಣು ಶಕ್ತಿ ನಿಯಂತ್ರಣ ಮಂಡಳಿ (ಎಇಆರ್‌ಬಿ) ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು