ಮಂಗಳವಾರ, ಮೇ 17, 2022
26 °C

ಮಂಗಳೂರು: ಬಾಲಕಿ ಮೇಲೆ‌ ಅತ್ಯಾಚಾರ: ಒಬ್ಬನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಆರೋಪಿ ಪರಾರಿಯಾಗಲು ಸಹಕರಿಸಿದ ಸಂತ್ರಸ್ತ ಬಾಲಕಿಯ ಅಣ್ಣನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ ಲಕ್ಷ್ಮಿಪ್ರಸಾದ ತಿಳಿಸಿದ್ದಾರೆ.

ಜನವರಿ 25 ರಂದು ಆರೋಪಿಗಳು ಬಾಲಕಿಯ ಮೇಲೆ‌ ಅತ್ಯಾಚಾರ ಎಸಗಿರುವ ಆರೋಪಿಗಳು, ಬಾಲಕಿಯ ಖಾಸಗಿ ಫೊಟೊಗಳನ್ನು ತಮ್ಮ ಮೊಬೈಲ್‌ನಲ್ಲಿ ತೆಗೆದಿದ್ದಾರೆ. ಈ ಕೃತ್ಯವನ್ನು ಬಹಿರಂಗಪಡಿಸಿದಲ್ಲಿ ಖಾಸಗಿ ಪೋಟೋಗಳನ್ನು ಬೇರೆಯವರಿಗೆ ಕಳುಹಿಸುವುದಾಗಿ ಬೆದರಿಸಿದ್ದಾರೆ. ನಂತರದ ದಿನಗಳಲ್ಲೂ ಆರೋಪಿಗಳು ಬಾಲಕಿಗೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಒತ್ತಾಯಿಸಿದ್ದಾರೆ. 
ಈ ಬಗ್ಗೆ ಫೆಬ್ರುವರಿ 9 ರಂದು ಬಾಲಕಿಯ ಸಂಬಂಧಿಕರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಆರೋಪಿಗಳ ಪೈಕಿ ಒಬ್ಬನನ್ನು ‌ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಬಂಧನಕ್ಕೆ ವಿಟ್ಲ ಪೊಲೀಸ್ ತಂಡ ತೆರಳಿದ್ದಾಗ, ಸಂತ್ರಸ್ತ ಬಾಲಕಿಯ ಅಣ್ಣನು ಆರೋಪಿ ತಲೆಮರೆಸಿಕೊಳ್ಳಲು ಸಹಕರಿಸಿದ್ದಾನೆ. ಸಂತ್ರಸ್ತೆಯ ಅಣ್ಣನನ್ನೂ ಬಂಧಿಸಿದ್ದು, ತನಿಖೆ‌ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು