ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಂಪಸ್ ಸಂದರ್ಶನ: 300 ಹುದ್ದೆಗಳಿಗೆ ಆನ್‌ಲೈನ್ ಸಂದರ್ಶನ

Last Updated 14 ಆಗಸ್ಟ್ 2021, 3:44 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್ ಸಂಕಷ್ಟದ ನಡುವೆಯೂ ಶ್ರೀನಿವಾಸ ವಿಶ್ವವಿದ್ಯಾಲಯವು ಮುಕ್ಕ ಮತ್ತು ಮಂಗಳೂರಿನ ಶಾಖೆಗಳಲ್ಲಿ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ಏರ್ಪಡಿಸಿ, ಉದ್ಯೋಗ ಪಡೆಯಲು ನೆರವಾಗಿದೆ ಎಂದು ಸಂಸ್ಥೆಯ ಪ್ರಮುಖರು ಶುಕ್ರವಾರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ಲೇಸ್‌ಮೆಂಟ್ ಅಧಿಕಾರಿಗಳಾದ ಪ್ರೊ. ನೇತ್ರಾವತಿ, ಪ್ರೊ. ವರುಣ್ ಶೆಣೈ, ಪ್ರೊ. ಸಂಜಯ್, ಪ್ರೊ. ಅಶ್ವಿನಿ ಅವರು, ‘ಶ್ರೀನಿವಾಸ ವಿಶ್ವವಿದ್ಯಾಲಯ ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಸಿಲ್ವರ್ ಪೀಕ್ ಗ್ಲೋಬಲ್, ಲ್ಯೂಮಾಕ್ಸ್ ಆಟೊ, ಮರಿಯೆಟ್ ಪ್ರಾಪರ್ಟಿಸ್ ಸೇರಿದಂತೆ ಸುಮಾರು 180 ಉದ್ಯೋಗ ಸಂಸ್ಥೆಗಳು, 300ಕ್ಕೂ ಹೆಚ್ಚು ಹುದ್ದೆಗಳಿಗೆ ಆನ್‌ಲೈನ್ ಸಂದರ್ಶನ ನಡೆಸಿದವು’ ಎಂದರು.

ಮ್ಯಾನೇಜ್‌ಮೆಂಟ್, ಎಂಜಿನಿ ಯರಿಂಗ್, ಕಾಮರ್ಸ್, ಕಂಪ್ಯೂಟರ್ ವಿಜ್ಞಾನ ವಿಷಯಗಳಲ್ಲಿ ತೇರ್ಗಡೆಯಾದವರಿಗೆ ವಾರ್ಷಿಕ ₹3.5 ಲಕ್ಷದಿಂದ ₹17 ಲಕ್ಷದವರೆಗೆ ವೇತನ, ಫಿಸಿಯೊಥೆರಪಿ ಮತ್ತು ಆರೋಗ್ಯ ವಿಜ್ಞಾನ ವಿಷಯದಲ್ಲಿ ತೇರ್ಗಡೆಯಾದವರಿಗೆ ವಾರ್ಷಿಕ ₹24 ಲಕ್ಷದವರೆಗೆ ವೇತನ ದೊರೆತಿದೆ. ದುಬೈ ಹಾಗೂ ಸೌದಿ ಅರೇಬಿಯಾದ ಅಭಿಟೆಕ್ ಎಲೆಕ್ಟ್ರಿಕಲ್ ಟ್ರೇಡಿಂಗ್ ಮತ್ತು ಇತರ ಸಂಸ್ಥೆಗಳಲ್ಲಿ ಶೇ 100 ವಿದ್ಯಾರ್ಥಿಗಳಿಗೆ ಇಂಟರ್ನ್ ಷಿಪ್ ತರಬೇತಿ ಹಮ್ಮಿಕೊಳ್ಳಲಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲು ಸಹಕಾರಿಯಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT