ಮಂಗಳೂರು: ಆನ್ ಲೈನ್ ಟ್ರೇಡಿಂಗ್ ನಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದು ಆಮಿಷ ವೊಡ್ಡಿ ₹23.10 ಲಕ್ಷ ಹಣ ಪಡೆದು ವಂಚಿಸಿದ ಕುರಿತು ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದು ನಗರದ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನನಗೆ 2025ರ ಡಿ.11ರಂದು ಫೇಸ್ ಬುಕ್ನಲ್ಲಿ ಮೋಹನ ಪಾಟೀಲ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಅಮೆರಿಕದ ಆನ್ ಲೈನ್ ಟ್ರೇಡಿಂಗ್ನಲ್ಲಿ 15 ವರ್ಷ ಅನುಭವವಿದ್ದು, ‘ಸ್ಟಾಕ್ ಮಾರ್ಕೆಟ್ ವಿನ್ನರ್’ ಕೃತಿ ರಚಿಸಿದ್ದೇನೆ ಎಂಬುದಾಗಿ ಆತ ತಿಳಿಸಿದ್ದ. ಆತನ ಸಲಹೆ ಮೇರೆಗೆ ವಾಟ್ಸ್ ಆ್ಯಪ್ ಗ್ರೂಪ್ಗೆ ಸೇರಿದ್ದೆ. ಆನ್ ಲೈನ್ ಟ್ರೇಡಿಂಗ್ನಲ್ಲಿ ಲಾಭ ಗಳಿಸುವ ಕುರಿತು ಮೋಹನ ಪಾಟೀಲ ಸಲಹೆ ನೀಡಿದ್ದ. ಆತ ಸೂಚಿಸಿದ ಷೇರು ಖರೀದಿಗೆ ನಾನು ಬೇರೆ ಬೇರೆ ಖಾತೆಗಳಿಗೆ 2026 ಜ.12ರಿಂದ ಜ.31ರವರೆಗೆ ಸುಮಾರು ₹23.10 ಲಕ್ಷವನ್ನು ಹಂತ ಹಂತವಾಗಿ ಪಾವತಿಸಿದ್ದೆ. ಟ್ರೇಡಿಂಗ್ ಆಪ್ನಲ್ಲಿ ನನ್ನ ಖಾತೆಯಲ್ಲಿದ್ದ ಹಣದ ಮೊತ್ತ ₹47 ಲಕ್ಷಕ್ಕೆ ಏರಿಕೆ ಆಗಿತ್ತು. ಅದನ್ನು ನಗದೀಕರಿಸಲು ಯತ್ನಿಸಿದಾಗ ಖಾತೆ ಬ್ಲಾಕ್ ಆಗಿತ್ತು. ಬ್ಲಾಕ್ ತೆಗೆಸಲು ₹18 ಲಕ್ಷ ನೀಡಬೇಕು ಎಂದು ತಿಳಿಸಿದರು. ಆಗ ವಂಚನೆಗೆ ಒಳಗಾಗಿದ್ದು ಗೊತ್ತಾಯಿತು ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.