ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ವಾಣಿಜ್ಯ ಉಪನ್ಯಾಸಕ ಪ್ರೊ.ಬಿ.ಎಸ್.ರಾಮನ್‌ ನಿಧನ

Last Updated 28 ಜುಲೈ 2018, 10:56 IST
ಅಕ್ಷರ ಗಾತ್ರ

ಮಂಗಳೂರು:ಸೇಂಟ್‌ ಅಲೋಶಿಯಸ್ ಕಾಲೇಜಿನಲ್ಲಿ 35 ವರ್ಷಗಳ ಕಾಲ ವಾಣಿಜ್ಯ ವಿಭಾಗದ ಉಪನ್ಯಾಸಕರಾಗಿದ್ದ ಹಾಗೂ 100ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದ ಪ್ರೊ.ಬಿ.ಎಸ್‌.ರಾಮನ್‌ (81) ಶುಕ್ರವಾರ ತಮಿಳುನಾಡಿನ ಊಟಿಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

1960ರಲ್ಲಿ ಅಲೋಶಿಯಸ್‌ ಕಾಲೇಜು ಸೇರಿದ್ದ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕರಾಗಿದ್ದರು. ಅತ್ಯಂತ ಕಟ್ಟುನಿಟ್ಟಿನ ಗುರುಗಳಾಗಿದ್ದ ಅವರ ತರಗತಿಗೆ ಚಕ್ಕರ್ ಹೊಡೆಯುವ ವಿದ್ಯಾರ್ಥಿಗಳೇ ಇರಲಿಲ್ಲ. ಅವರು ಒಟ್ಟಾರೆ 20 ಸಾವಿರಕ್ಕಿಂತಲೂ ಅಧಿಕ ಶಿಷ್ಯರನ್ನು ಹೊಂದಿದ್ದು, ಮಂಗಳೂರಿನ ಬಹುತೇಕ ಲೆಕ್ಕ ಪರಿಶೋಧಕರು ಅವರ ಪ್ರಭಾವಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಒಳಗಾದವರು.

ರಾಮನ್‌ ಅವರು ಅಕೌಂಟೆನ್ಸಿ, ಕಾಮರ್ಸ್, ಎಕನಾಮಿಕ್ಸ್, ಬಿಸಿನೆಸ್‌ ಲಾ ಮೊದಲಾದ ವಿಷಯಗಳಲ್ಲಿ 100ಕ್ಕಿಂತ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಹಲವು ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪಠ್ಯಗಳಾಗಿವೆ. ಮಂಗಳೂರು ಭಾಗದಲ್ಲಿ ಬಿಬಿಎ ಕೋರ್ಸ್‌ ಆರಂಭಿಸಿದವರು ಇವರೇ.

ತಮ್ಮ ನಿವೃತ್ತಿಯ ನಂತರ ರಾಮನ್‌ ಬಹಳ ವರ್ಷ ಮಂಗಳೂರಿನಲ್ಲಿ ನೆಲೆಸಿದ್ದರು. ಬಳಿಕ 4 ವರ್ಷ ಬೆಂಗಳೂರಿನಲ್ಲಿದ್ದರು. ಈಚೆಗೆ ಅವರು ತಮ್ಮ ಹುಟ್ಟೂರಾದ ಊಟಿಗೆ ತೆರಳಿ ಅಲ್ಲೇ ನೆಲೆಸಿದ್ದರು.

ಕಾಲೇಜಿನ ಆಡಳಿತ ಮಂಡಳಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘ 2016ರಲ್ಲಿ ’ದಿ ಎಮಿನಿಯಂಟ್‌ಅಲೋಷಿಯನ್‌ಪ್ರಶಸ್ತಿ’ ನೀಡಿ ಗೌರವಿಸಿತ್ತು.

ಮೃತರ ಅಂತ್ಯಕ್ರಿಯೆ ಶನಿವಾರ ಊಟಿಯಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT