ಶನಿವಾರ, ಮಾರ್ಚ್ 25, 2023
25 °C
ಸುಳ್ಯ ವಿದ್ಯುತ್ ಸಮಸ್ಯೆ ಬಗ್ಗೆ ಸಚಿವರು ಮಾತನಾಡುತ್ತಿಲ್ಲ: ಟಿ.ಎಂ.ಶಹೀದ್

ಸುಳ್ಯ: ಅಸಮರ್ಪಕ ವಿದ್ಯುತ್ ಪೂರೈಕೆ- ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಳ್ಯ: ತಾಲ್ಲೂಕಿನ ಗ್ರಾಮೀಣ ಭಾಗಕ್ಕೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್ ನೇತೃತ್ವದಲ್ಲಿ ಮೆಸ್ಕಾಂ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.

‘ವಿದ್ಯುತ್ ಸಮಸ್ಯೆ ದಶಕಗಳಿಂದ ಇದೆ. ನಮ್ಮ ಬೇಡಿಕೆ ಈಡೇರಲು ತಾಲ್ಲೂಕನ್ನು ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾದ ಅನಿವಾರ್ಯತೆ ಇದೆ’ ಎಂದು ಕೆಪಿಸಿಸಿ ಸಹಾಯ ಹಸ್ತ ಕಾರ್ಯಕ್ರಮದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಧನಂಜಯ ಅಡ್ಪಂಗಾಯ ಹೇಳಿದರು.

ಟಿ.ಎಂ. ಶಹೀದ್‌ ಮಾತನಾಡಿ, ‘ತಾಲ್ಲೂಕಿನಾದ್ಯಂತ ಹಲವು ದಿನಗಳಿಂದ ವಿದ್ಯುತ್ ಇಲ್ಲ. ವಿದ್ಯುತ್ ಸಮಸ್ಯೆ ಬಗ್ಗೆ ಸಚಿವರು ಮಾತನಾಡುತ್ತಿಲ್ಲ. 110 ಕೆ.ವಿ ವಿದ್ಯುತ್ ಯೋಜನೆ ನನೆಗುದಿಗೆ ಬಿದ್ದಿದೆ. ವಿದ್ಯುತ್ ಸಮಸ್ಯೆಯಿಂದ ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗಳಿಗೆ ತೊಂದರೆ ಆಗುತ್ತಿದೆ’ ಎಂದರು.

ಮೆಸ್ಕಾಂ ತಾಂತ್ರಿಕ ಅಧಿಕಾರಿ ಸುಪ್ರಿತ್ ಮನವಿ ಸ್ವೀಕರಿಸಿ, ‘ಮಳೆಯಲ್ಲಿ ಮರದ ಕೊಂಬೆ ಬೀಳುವುದರಿಂದ ಕೆಲವೊಮ್ಮೆ ವಿದ್ಯುತ್ ವ್ಯತ್ಯಯವಾಗುತ್ತದೆ. ಸಂಪಾಜೆಯಲ್ಲಿ 33 ಕೆ.ವಿ ಉಪಕೇಂದ್ರ ಕೆಲಸ ಪ್ರಗತಿಯಲ್ಲಿದೆ’ ಎಂದರು. 

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಸಂಪಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಕೆ.ಹಮೀದ್, ಬ್ಲಾಕ್ ಉಪಾಧ್ಯಕ್ಷ ಸುಧೀರ್ ರೈ ಮೇನಾಲ, ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ರಾಜ್ಯ ಸಂಯೋಜಕ ಎಸ್.ಕೆ.ತಾಜ್ ಮಹಮ್ಮದ್ ಸಂಪಾಜೆ, ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎ. ರಿಯಾರ ಕಲ್ಲುಗುಂಡಿ, ಪ್ರಮುಖರಾದ ರಹೀಂ ಬೀಜದಕಟ್ಟೆ, ಅಬ್ದುಲ್ ಖಾದರ್ ಮೊಟ್ಟೆಂಗಾರ್, ಅಬೂಸಾಲಿ ಗೂನಡ್ಕ, ಅನಿಲ್ ಬಳ್ಳಡ್ಕ, ಫವಾಜ್ ಕನಕಮಜಲು, ಎಸ್.ಕೆ.ಹನೀಫ್, ಕೆ.ಪಿ.ಜಾನಿ, ಜಯಪ್ರಕಾಶ್ ನೆಕ್ರೆಪ್ಪಾಡಿ, ಅಶ್ರಫ್ ಟರ್ಲಿ, ರಹೀಮ್ ಬೀಜದಕಟ್ಟೆ, ಆರಿಫ್ ಗೂನಡ್ಕ, ಹ್ಯಾರಿಸ್ ಗೂನಡ್ಕ, ಪ್ರಸಾದ್ ಕಲ್ಲುಗುಂಡಿ, ಅಯ್ಯುಬ್ ಗೂನಡ್ಕ, ಅಜರ್ ಗೂನಡ್ಕ, ಅಬ್ದುಲ್ ರಹಿಮಾನ್, ಸಚಿನ್ ರಾಜ ಶೆಟ್ಟಿ ಪೆರುವಾಜೆ, ಸಿದ್ದೀಕ್ ಕೊಕ್ಕೊ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು