ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಪಾಲಿಕೆ ಹಸಿಕಸದಿಂದ ಸಿಎನ್ಜಿ ತಯಾರಿಸುವ ಮೂಲಕ ಕಸವು ವ್ಯರ್ಥ ಪದಾರ್ಥ ವಲ್ಲ. ಅದರಿಂದ ವರಮಾನವನ್ನೂ ಗಳಿಸಬಹುದು, ಇಂಧನ ವೆಚ್ಚವನ್ನೂ ಉಳಿಸಬಹುದು ಎಂದು ತೋರಿಸಿಕೊಟ್ಟಿದೆ. ಬಯೋಗ್ಯಾಸ್ ಯೋಜನೆಯಡಿ ಪುತ್ತೂರಿನ ಹೊರವಲಯದ ಬನ್ನೂರಿನಲ್ಲಿ ಸುಮಾರು ₹ 3 ಕೋಟಿ ವೆಚ್ಚದಲ್ಲಿ ಜೈವಿಕ ಅನಿಲ ಘಟಕವನ್ನು ಸ್ಥಾಪಿಸಲಾಗಿದೆ. ಸ್ಥಳೀಯ ರೋಟರಿ ಕ್ಲಬ್ನ ಸ್ವಚ್ಛ ಭಾರತ್ ಟ್ರಸ್ಟ್, ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಸಂಸ್ಥೆ ಹಾಗೂ ರಿಟ್ಯಾಪ್ ಸಲ್ಯೂಷನ್ಸ್ ಸಂಸ್ಥೆಗಳು ಈ ಯೋಜನೆ ಅನುಷ್ಠಾನದಲ್ಲಿ ಕೈಜೋಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.