ಪುತ್ತೂರು: ಇಲ್ಲಿನ ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ ಪದವಿ ಪತ್ರಿಕೋದ್ಯಮ ವಿಭಾಗ, ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ, ಐಕ್ಯುಎಸಿ ಸಹಯೋಗದಲ್ಲಿ ನಡೆದ ‘ವಿವೇಕ್ ಚೇತನ’ ಮಾಧ್ಯಮ ಹಬ್ಬದಲ್ಲಿ ಸುರತ್ಕಲ್ನ ಗೋವಿಂದದಾಸ ಕಾಲೇಜು ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ.

ದ್ವಿತೀಯ ಸಮಗ್ರ ಪ್ರಶಸ್ತಿ ಉಜಿರೆ ಎಸ್ಡಿಎಂ ಕಾಲೇಜು ಗಳಿಸಿದೆ. ಈ ಬಾರಿಯ ವಿವೇಕ ಚೇತನ ಪ್ರಶಸ್ತಿಯನ್ನು ಬಂಟ್ವಾಳದ ಮೈತ್ರೇಯಿ ಗುರುಕುಲದ ಅಧ್ಯಾಪಕಿ ಶ್ರೀಮತಿ ಅವರಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ ಭಟ್ ಕಲ್ಲಡ್ಕ ಅವರು ಪ್ರದಾನ ಮಾಡಿದರು.

ಮೈಸೂರು ಅಮೃತ ವಿಶ್ವ ವಿದ್ಯಾಪೀಠಂನ ದೃಶ್ಯ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಮೌಲ್ಯ ಬಾಲಾಡಿ ಕಾರ್ಯಕ್ರಮ ಉದ್ಘಾಟಿಸಿದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಶ್ರೀಪತಿ ಕಲ್ಲೂರಾಯ ಅಧ್ಯಕ್ಷತೆ ವಹಿಸಿದ್ದರು. ನಿರೂಪಕ ರಂಜಿತ್ ಶಿರಿಯಾರ, ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್, ಕಾರ್ಯಕ್ರಮ ಸಂಯೋಜಕ ಸುತನ್ ಕೇವಳ, ವಿಶೇಷಾಧಿಕಾರಿ ಶ್ರೀಧರ್ ನಾಯಕ್, ಸ್ನಾತಕೋತ್ತರ ವಿಭಾಗದ ಡೀನ್ ವಿಜಯಸರಸ್ವತಿ, ವಿವೇಕ ಚೇತನ್ ಕಾರ್ಯಕ್ರಮದ ಸಂಯೋಜಕ ಹರಿಪ್ರಸಾದ್ ಈಶ್ವರಮಂಗಲ ಭಾಗವಹಿಸಿದ್ದರು.

ಕಾಲೇಜಿನ ಪರೀಕ್ಷಾಂಗ ಕುಲಸಚಿವ ಎಚ್.ಜಿ.ಶ್ರೀಧರ ಸ್ವಾಗತಿಸಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ ಪಿ.ಆರ್.ನಿಡ್ಪಳ್ಳಿ ವಂದಿಸಿದರು. ದೀಕ್ಷಾ, ಪಂಚಮಿ, ಶೈನಿತಾ, ಚೈತನ್ಯ, ಭೂಮಿಕಾ ನಿರೂಪಿಸಿದರು. ಸಮಾರೋಪದಲ್ಲಿ ಧನರಾಜ್ ಆಚಾರ್ ಅತಿಥಿಯಾಗಿದ್ದರು. ಕಾಲೇಜು ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.