ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾನಿಧ್ಯಕ್ಕೆ ಇಪ್ಪತ್ತು: ‘ಟ್ವಿಂಕ್ಲಿಂಗ್ ಸ್ಟಾರ್‌’ ಗಮ್ಮತ್ತು

Published 11 ಡಿಸೆಂಬರ್ 2023, 17:12 IST
Last Updated 11 ಡಿಸೆಂಬರ್ 2023, 17:12 IST
ಅಕ್ಷರ ಗಾತ್ರ

ಮಂಗಳೂರು: ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳಿಗಾಗಿ ನಗರದ ಸಾನಿಧ್ಯ ಸಂಸ್ಥೆ ಆಯೋಜಿಸಿರುವ ಜಾನಪದ ನೃತ್ಯೋತ್ಸವ ‘ಟ್ವಿಂಕ್ಲಿಂಗ್ ಸ್ಟಾರ್ಸ್‌’ ಇದೇ 13 ಮತ್ತು 14ರಂದು ಪುರಭವನದಲ್ಲಿ ನಡೆಯಲಿದೆ.

ಸಾನಿಧ್ಯಕ್ಕೆ 20 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಶಾಲೆಗಳಿಂದ 500ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಳ್ಳಲಿದ್ದು 150ಕ್ಕೂ ಹೆಚ್ಚು ಸಹಾಯಕರು ಮತ್ತು 50ರಷ್ಟು ಸ್ವಯಂಸೇವಕರು ಭಾಗವಹಿಸಲಿದ್ದಾರೆ. ದೂರದ ಜಿಲ್ಲೆಗಳಿಂದ ಬರುವವರಿಗೆ ಪ್ರಯಾಣ ವೆಚ್ಚ ನೀಡಲಾಗುವುದು ಎಂದು ಸಾನಿಧ್ಯದ ಆಡಳಿತಾಧಿಕಾರಿ ವಸಂತ ಕುಮಾರ್ ಶೆಟ್ಟಿ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಮತ್ತು 5 ಪ್ರೋತ್ಸಾಹಕ ಬಹುಮಾನ ನೀಡಲಾಗುವುದು. ಬಹುಮಾನ ನಗದು, ಪ್ರಶಸ್ತಿ ಪತ್ರ ಮತ್ತು ನಗದು ಒಳಗೊಂಡಿರುತ್ತದೆ ಎಂದು ವಿವರಿಸಿದರು.

13ರಂದು ಬೆಳಿಗ್ಗೆ 9.15ಕ್ಕೆ ಹಂಪನಕಟ್ಟೆಯಿಂದ ಮೆರವಣಿಗೆ ನಡೆಯಲಿದ್ದು ವಿಠಲ್‌ ಶೆಟ್ಟಿ ಫೌಂಡೇಷನ್‌ನ ಸಂಸ್ಥಾಪಕ ರಾಕೇಶ್ ಅಣ್ಣಾ ಶೆಟ್ಟಿ ಮತ್ತು ಮಹಾನಗರ ಪಾಲಿಕೆ ಸದಸ್ಯೆ ಶಕೀಲಾ ಕಾವ ಪಾಲ್ಗೊಳ್ಳುವರು. 11 ಗಂಟೆಗೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು  ಸ್ಪರ್ಧೆಗಳನ್ನು ಉದ್ಘಾಟಿಸುವರು. ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ದೀಪ ಬೆಳಗಿಸುವರು. ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್.ಕೇಶವ್ ಅಧ್ಯಕ್ಷತೆ ವಹಿಸುವರು. ಮಹಾನಗರ ಪಾಲಿಕೆ ಸದಸ್ಯ ಕಿಶೋರ್ ಕುಮಾರ್ ಕೊಟ್ಟಾರಿ, ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ, ಗುರು ಬೆಳದಿಂಗಳು ಸಂಸ್ಥೆಯ ಸಂಸ್ಥಾಪಕ ಆರ್‌.ಪದ್ಮರಾಜ್‌, ಕಲಾವಿದ ವಿಜಯಕುಮಾರ್ ಕೊಡಿಯಾಲ್‌ಬೈಲ್, ಉದ್ಯಮಿಗಳಾದ ಅಬ್ದುಲ್ಲ ಮೋನು, ಸಂತೋಷ್ ಸಿಕ್ವೇರಾ ಭಾಗವಹಿಸುವರು ಎಂದು ಎಂದು ವಸಂತ ಕುಮಾರ್ ಶೆಟ್ಟಿ ತಿಳಿಸಿದರು.

14ರಂದು 3.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖಂಡ ಕೃಷ್ಣ ಪಾಲೆಮಾರ್ ಅಧ್ಯಕ್ಷತೆ ವಹಿಸುವರು. ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕ ಸುಧಾಕರ ಕೊಟ್ಟಾರಿ ಸಂದೇಶ ನೀಡುವರು. ಐಎಎಂ ಫೌಂಡೇಷನ್ ಸಂಸ್ಥಾಪಕ ಇನಾಯತ್ ಅಲಿ, ಎ.ಜೆ. ಆಸ್ಪತ್ರೆ ವೈದ್ಯ ಡಾ.ಪಿ.ಕೆ. ಕಿರಣ್ ಕುಮಾರ್, ನಟ ದೇವದಾಸ್ ಕಾಪಿಕಾಡ್‌, ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಹಾಗೂ ಸದಸ್ಯೆ ವನಿತಾ ಪ್ರಸಾದ್ ಭಾಗವಹಿಸುವರು. 13ರಂದು ಸಂಜೆ 7 ಗಂಟೆಗೆ ಕರಾವಳಿ ಸಂಗೀತ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.

ಸಾನಿಧ್ಯದ ಅಧ್ಯಕ್ಷ ಮಹಾಬಲ ಮಾರ್ಲ, ಖಜಾಂಚಿ ಜಗದೀಶ್ ಶೆಟ್ಟಿ, ಟ್ವಿಂಕ್ಲಿಂಗ್ ಸ್ಟಾರ್ಸ್ ಸಂಚಾಲಕರಾದ ಅಶ್ವಿನ್ ಕೊಟ್ಟಾರಿ ಮತ್ತು ರಾಕೇಶ ಶೆಟ್ಟಿ ಇದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT