ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಬದಿಗಿಟ್ಟು ಅಭಿವೃದ್ಧಿಗೆ ಗಮನ: ಶಾಸಕ ಸಂಜೀವ ಮಠಂದೂರು

ಕೂಟೇಲು ರಸ್ತೆ ಲೋಕಾರ್ಪಣೆ ಮಾಡಿದ ಶಾಸಕ ಸಂಜೀವ ಮಠಂದೂರು
Last Updated 19 ಸೆಪ್ಟೆಂಬರ್ 2022, 4:43 IST
ಅಕ್ಷರ ಗಾತ್ರ

ಪುತ್ತೂರು: ‘ರಾಜಕೀಯವನ್ನು ಬದಿಗಿಟ್ಟು, ಜನರ ಬೇಡಿಕೆಗಳನ್ನು ಈಡೇರಿಸುವ ಕೆಲಸವನ್ನು ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತಿದೆ’ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ರೆಂಜ- ಮುಡ್ಪಿನಡ್ಕ ರಸ್ತೆಯ ನಿಡ್ಪಳ್ಳಿ ಗ್ರಾಮದ ಕೂಟೇಲು ಎಂಬಲ್ಲಿ ₹2.52 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸೇತುವೆಯನ್ನುಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಿಲ್ವಗಿರಿ, ಹನುಮಗಿರಿ, ಗೆಜ್ಜೆಗಿರಿ ಕ್ಷೇತ್ರಗಳಿಗೆ ವ್ಯವಸ್ಥಿತ ಸಂಪರ್ಕ ವ್ಯವಸ್ಥೆಗಳಾಗಬೇಕಿದ್ದು, ಈ ನಿಟ್ಟಿನಲ್ಲಿ ನಾವು ಯೋಜನೆ ರೂಪಿಸುತ್ತಿದ್ದೇವೆ ಎಂದು ತಿಳಿಸಿದರು.

ನಿಡ್ಪಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಡಿ., ಉಪಾಧ್ಯಕ್ಷ ವೆಂಕಟರಮಣ ಬೋರ್ಕರ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ರಾಜಾರಾಮ್, ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರ ಡಿ., ಪ್ರಮುಖರಾದ ಸಾಜ ರಾಧಾಕೃಷ್ಣ ಆಳ್ವ, ಆರ್.ಸಿ. ನಾರಾಯಣ್, ನಾಗೇಶ್, ಗುತ್ತಿಗೆದಾರರಾದ ಉಡುಪಿ ಕೇದಾರನಾಥ ಕನ್‌ಸ್ಟ್ರಕ್ಷನ್‌ ಕೆಮ್ತೂರು ಕೃಷ್ಣಮೂರ್ತಿ ಭಟ್, ಜುನೈದ್ ಪುತ್ತೂರು ಇದ್ದರು. ಪದ್ಮನಾಭ ಬೋರ್ಕರ್ ಸ್ವಾಗತಿಸಿ ವಂದಿಸಿದರು. ರಾಧಾಕೃಷ್ಣ ಬೋರ್ಕರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT