ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1250 ಕೋಟಿ ಅಲ್ಪಾವಧಿ ಬೆಳೆ ಸಾಲ

ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಕೃಷಿತಜ್ಞ ಪ್ರತಿನಿಧಿಗಳ ಸಭೆ
Last Updated 13 ಡಿಸೆಂಬರ್ 2019, 13:47 IST
ಅಕ್ಷರ ಗಾತ್ರ

ಮಂಗಳೂರು: ಅಲ್ಪಾವಧಿ ಬೆಳೆ ಸಾಲ ಮಿತಿಯನ್ನು 2020-21ನೇ ಸಾಲಿಗೆ ನಿಗದಿಪಡಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಕೃಷಿತಜ್ಞ ಪ್ರತಿನಿಧಿಗಳ ಸಮಾಲೋಚನಾ ಸಭೆಯು ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಶುಕ್ರವಾರ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ಮಾತನಾಡಿ, ಎಸ್‌ಸಿಡಿಸಿಸಿ ಬ್ಯಾಂಕ್ 2019-20ನೇ ಸಾಲಿಗೆ ಬೆಳೆಸಾಲಗಳ ಗುರಿಯು ₹1250 ಕೋಟಿಯಾಗಿದ್ದು, ಈ ವರ್ಷದ ಮಾರ್ಚ್‌ ಅಂತ್ಯಕ್ಕೆ ಬೆಳೆಸಾಲಗಳ ಹೊರಬಾಕಿ ₹1127 ಕೋಟಿಯಾಗಿದೆ. ಈಗಾಗಲೇ ರೂ.1038 ಕೋಟಿ ಬೆಳೆಸಾಲ ನೀಡಿದೆ ಎಂದರು.

ನಬಾರ್ಡ್ ಪುನರ್‌ಧನ ಸಾಲ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕಿನ ಸ್ವಂತ ಬಂಡವಾಳದಿಂದ ಕೃಷಿ ಉದ್ದೇಶಕ್ಕಾಗಿ 2018-19ನೇ ಸಾಲಿನಲ್ಲಿ ಒಟ್ಟು ₹111 ಕೋಟಿ ಅವಧಿ ಸಾಲವನ್ನು ನೀಡಲಾಗಿದೆ. 2019-20ನೇ ಸಾಲಿಗೆ ಈಗಾಗಲೇ ರೂ.87.18 ಕೋಟಿ ಮಧ್ಯಮಾವಧಿ/ದೀರ್ಘಾವಧಿ ಕೃಷಿ ಸಾಲವನ್ನು ಬ್ಯಾಂಕ್ ನೀಡಿದೆ ಎಂದು ತಿಳಿಸಿದರು.

2020-21ನೇ ಸಾಲಿಗೆ ವಿವಿಧ ಬೆಳೆಗಳಿಗೆ ಕೊಡಲಾಗುವ ಅಲ್ಪಾವಧಿ ಬೆಳೆಸಾಲದ ಮಿತಿಯನ್ನು ಕೃಷಿತಜ್ಞ ಪ್ರತಿನಿಧಿಗಳೊಂದಿಗೆ, ನಬಾರ್ಡ್, ಲೀಡ್ ಬ್ಯಾಂಕ್, ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಇಲಾಖೆ, ತೋಟಗಾರಿಕೆ, ಕೃಷಿ ಹಾಗೂ ಇತರ ಇಲಾಖಾಧಿಕಾರಿಗಳ ಸಮಾಲೋಚನೆಯ ಮೂಲಕ ನಿಗದಿಪಡಿಸಲಾಯಿತು.

ಎಸ್‌ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ.ರಾಜಾರಾಮ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಎಂ.ವಾದಿರಾಜ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ, ಕೆ.ಜೈರಾಜ್ ಬಿ.ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಮಹೇಶ್ ಹೆಗ್ಡೆ, ರಾಜೇಶ್ ರಾವ್, ಅಶೋಕ್ ಕುಮಾರ್ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಪ್ರಭಾರ ಉಪನಿಬಂಧಕಿ ಚಂದ್ರಪ್ರತಿಮಾ, ನಬಾರ್ಡ್ ಡಿಡಿಎಂ ಎಸ್. ರಮೇಶ್, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ., ಲೀಡ್ ಬ್ಯಾಂಕ್‌ ಮ್ಯಾನೇಜರ್‌ ಪ್ರವೀಣ್ ಎಂ.ಪಿ, ಸಿಂಡಿಕೇಟ್ ಬ್ಯಾಂಕಿನ ಅಧಿಕಾರಿ ರಾಣಿ ಎ.ಬಿ., ಫ್ರಾನ್ಸಿಸ್ ಬೊರ್ಗಿಯ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಎಚ್., ತೋಟಗಾರಿಕೆ ಸಹಾಯಕ ನಿರ್ದೇಶಕ ಕೆ.ಪ್ರವೀಣ್, ಪಶುಸಂಗೋಪನೆಯ ಇಲಾಖಾ ಅಧಿಕಾರಿ ಡಾ.ಹರೀಶ್ ಮತ್ತು ಗುರುಮೂರ್ತಿ, ರಬ್ಬರ್ ಮಂಡಳಿ ಅಧಿಕಾರಿ ಬಾಲಕೃಷ್ಣ ಎಸ್., ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಅಧಿಕಾರಿ ಡಾ. ಮಹೇಶ್, ಜಾನುವಾರು ಅಭಿವೃದ್ಧಿ ಅಧಿಕಾರಿ ಎ.ಸಿ. ಮಸ್ಕರೇನಸ್, ಬ್ಯಾಂಕಿನ ಮಹಾಪ್ರಬಂಧಕ ಗೋಪಿನಾಥ್ ಭಟ್ ಹಾಗೂ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT