ಮೂಡುಬಿದಿರೆ: ಸುಹಾಸ್ತಿ ಯುವ ಜೈನ್ ಮಿಲನ ಬೆಂಗಳೂರು ಮತ್ತು ಸಿಂಗಪುರ ಜೈನ್ ಮಿಲನ್ ಸಿಂಗಪುರದ ಆಲೋಫ್ಟ್ ನೊವೆನಾದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಜಿನ ಸಮ್ಮಿಲನ - 2025ರಲ್ಲಿ ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಗೆ ಕರ್ನಾಟಕದ ಅತ್ಯುತ್ತಮ ಶಿಕ್ಷಣ ಸಂಸ್ಥೆ -2025 ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗುರುಕುಲ ಮಾದರಿ ಶಿಕ್ಷಣ, ಯೋಗ, ಭಜನೆ, ಧ್ಯಾನ, ಶಿಸ್ತಿನ ಜೀವನ ಪಾಠ, ಶೂನ್ಯ ತ್ಯಾಜ್ಯ ಆವರಣ, 13 ವರ್ಷಗಳಿಂದ ಪ್ರತಿ ವರ್ಷವೂ ರಾಜ್ಯಮಟ್ಟದಲ್ಲಿ 10ರಿಂದ 15 ರ್ಯಾಂಕ್, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ, ಆಡಳಿತ ಮಂಡಳಿ- ಉಪನ್ಯಾಸಕ ಹಾಗೂ ವಿದ್ಯಾರ್ಥಿಗಳ ಮಧ್ಯೆ ಉತ್ತಮ ಬಾಂಧವ್ಯ ಪರಿಗಣಿಸಿ ಈ ಪ್ರಶಸ್ತಿ ಪ್ರದಾನಮಾಡಲಾಯಿತು.

ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಮನ್ವಿತ್ ರಾಜ್ ಜೈನ್ ಪ್ರಶಸ್ತಿಯನ್ನು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕದಿಂದ 275 ಪ್ರತಿನಿಧಿಗಳು, ಸಿಂಗಪುರದ ಜೈನ ಸಮುದಾಯವರು ಭಾಗವಹಿಸಿದ್ದರು.

ದಿಗಂಬರ ಜೈನ ಮಠ ವರೂರಿನ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಮಹಾಸ್ವಾಮಿ, ದಿಗಂಬರ ಜೈನ ಮಠ ಆರತಿಪುರದ ಸ್ವಸ್ತಿಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.

ಭಾರತೀಯ ಜೈನ್ ಮಿಲನ್ ನವದೆಹಲಿಯ ರಾಷ್ಟ್ರೀಯ ಕಾರ್ಯಧ್ಯಕ್ಷ ಡಿ.ಸುರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಜೈನ್ ಮಿಲನ್ ನವದೆಹಲಿ ಅಂತರರಾಷ್ಟ್ರೀಯ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷರಾದ ಎನ್.ಪ್ರಸನ್ನಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.