ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗೋ ಸಾಗಣೆ ತಡೆದು ಹಲ್ಲೆ: ನಾಲ್ವರ ಬಂಧನ

Last Updated 28 ಜೂನ್ 2019, 14:13 IST
ಅಕ್ಷರ ಗಾತ್ರ

ಉಪ್ಪಿನಂಗಡಿ:ಕಣಿಯೂರು ಗ್ರಾಮದ ಮೊಗ್ರು ಎಂಬಲ್ಲಿ ಗುರುವಾರ ತಡ ರಾತ್ರಿ ಅಕ್ರಮ ಗೋಸಾಗಣೆ ನಡೆಸುತ್ತಿದ್ದ ಇಬ್ಬರು ಮತ್ತು ಇವರ ಹಲ್ಲೆ ನಡೆಸಿದ ಆರೋಪದಲ್ಲಿನಾಲ್ವರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಗೋ ಸಾಗಣೆಗೆ ಸಂಬಂಧಿಸಿದಂತೆ ಪಿಕ್ಆಪ್ ವಾಹನ ಚಾಲಕ ಬೆಳಾಲು ನಿವಾಸಿ ಹೊನ್ನಪ್ಪ ಗೌಡ, ಮೊಗ್ರು ಗ್ರಾಮದ ಮಾಪಲ ಮನೆಯ ಉಸ್ಮಾನ್ ಬಂಧಿತರು. ಹಲ್ಲೆ ನಡೆಸಿದ ಆರೋಪದಲ್ಲಿ ಬಂದಾರು ಗ್ರಾಮದ ಮೈರೋಲ್ತಡ್ಕ ನಿವಾಸಿ ಸಂತೋಷ್ ಪೂಜಾರಿ, ಕಣಿಯೂರು ಗ್ರಾಮದ ಪದ್ಮುಂಜ ನಿವಾಸಿ ಲತೀಶ, ಮೋರ್ಜಾಲು ನಿವಾಸಿ ಶರತ್ ಮತ್ತು ಧನರಾಜ್ ಎಂಬುವರನ್ನುಬಂಧಿಸಲಾಗಿದೆ.

ವಿವರ: ಜಾನುವಾರುಗಳನ್ನು ಕದ್ದು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂದು ಆರೋಪಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ರಾತ್ರಿ ಮೊಗ್ರು ಜಂಕ್ಷನ್‌ನಲ್ಲಿ ಪಿಕ್ಅಪ್ ವಾಹನವೊಂದನ್ನು ತಡೆದು ನಿಲ್ಲಿಸಿದ್ದರು. ಉಪ್ಪಿನಂಗಡಿ ಪೊಲೀಸರು ಅಲ್ಲಿಗೆ ಧಾವಿಸಿ, ಗೋಸಾಗಣೆಗಾರರನ್ನು ವಶಕ್ಕೆ ಪಡೆದರು. ಹಲ್ಲೆ ಆರೋಪದಲ್ಲಿ ನಾಲ್ವರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನೂ ವಶಕ್ಕೆ ಪಡೆದರು. ಅಲ್ಲಿದ್ದ ಬೈಕ್‌ಗಳನ್ನು ವಶ ತೆಗೆದುಕೊಂಡರು.

ಕಾರ್ಯಕರ್ತರ ಜಮಾವಣೆ: ಅಕ್ರಮ ಗೋ ಸಾಗಣೆ ತಡೆದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ 100ಕ್ಕೂ ಮಿಕ್ಕಿ ಕಾರ್ಯಕರ್ತರು ತಡ ರಾತ್ರಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ, ಅವರನ್ನು ಬಿಡುವಂತೆ ಆಗ್ರಹಿಸಿದರು. ಆದರೆ ಪೊಲೀಸರು ನಿರಾಕರಿಸಿ, ಪ್ರಕರಣ ದಾಖಲಿಸಿ, ಬಿಡುಗಡೆ ಮಾಡಲಾಗುವುದು ಎಂದರು.

ಶಾಸಕ ಧರಣಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಕೀಲ ಸುಬ್ರಹ್ಮಣ್ಯ ಅಗರ್ತ ಸೇರಿದಂತೆ ಪ್ರಮುಖರು ಠಾಣೆಗೆ ಆಗಮಿಸಿ ಧರಣಿ ನಡೆಸಿದರು. ಆದರೆ ಪೊಲೀಸರು ಅಕ್ರಮ ಗೋ ಸಾಗಣೆಗಾರರು ಹಾಗೂ ಗೋ ರಕ್ಷಕರ ವಿರುದ್ಧ ಪ್ರಕರಣ ದಾಖಲಿಸಿದರು.
ರಾತ್ರಿ 1 ಗಂಟೆಯಾದರೂ ಆರೋಪಿಗಳನ್ನು ಬಿಡದಿದ್ದಾಗ ಶಾಸಕರ ನೇತೃತ್ವದಲ್ಲಿ ಧರಣಿನಡೆಸಿದರು.

ಪ್ರಕ್ರಿಯೆ ಮುಗಿದ ಬಳಿಕನಾಲ್ವರನ್ನುಜಾಮೀನಿನಲ್ಲಿಬಿಡುಗಡೆಗೊಳಿಸಿದರು. ಯಾರ ಒತ್ತಡಕ್ಕೂ ಮಣಿಯದೆ ಆರೋಪಿಗಳವಿರುದ್ಧ ಕಾನೂನು ಪ್ರಕ್ರಿಯೆ ಜರುಗಿಸಿದ ಪುತ್ತೂರು ಗ್ರಾಮಾಂತರ ಪೊಲೀಸ್ ಸಿಐ ನಾಗೇಶ್ ಕದ್ರಿ ಹಾಗೂ ಉಪ್ಪಿನಂಗಡಿ ಎಸ್‌ಐ ನಂದಕುಮಾರ್ ಅಹಿತಕರ ಘಟನೆಗೆ ಆಸ್ಪದನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT