ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಕ್ಕರೆ ಕಾಡಿನಲ್ಲಿ ತಲೆ ಬುರುಡೆ ಪತ್ತೆ ಪ್ರಕರಣ; ಮೃತ ವ್ಯಕ್ತಿಯ ಗುರುತು ಪತ್ತೆ

Last Updated 9 ಆಗಸ್ಟ್ 2022, 8:31 IST
ಅಕ್ಷರ ಗಾತ್ರ

ವಿಟ್ಲ (ದಕ್ಷಿಣ ಕನ್ನಡ): ಇಲ್ಲಿಗೆ ಸಮೀಪದ ನೆಕ್ಕರೆ ಕಾಡಿನಲ್ಲಿ ತಲೆ ಬುರುಡೆ, ಎಲುಬು ಹಾಗೂ ಬಟ್ಟೆ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವನ್ನಪ್ಪಿದ ವ್ಯಕ್ತಿಯ ಗುರುತು ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು ಉಕ್ಕುಡ ಕಾಂತಡ್ಕ ನಿವಾಸಿ ನಾಗೇಶ್ ಗೌಡ (65) ಎಂದು ಗುರುತಿಸಲಾಗಿದೆ.

ನಾಗೇಶ್ ಗೌಡ ಅವರು 6 ತಿಂಗಳ ಹಿಂದೆ ನಾಪತ್ತೆಯಾಗಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಿನ್ನೆ ಸಂಜೆ ವೇಳೆ ಕಟ್ಟಿಗೆ ತರಲುಗುಡ್ಡಕ್ಕೆ ತೆರಳಿದ್ದವರಿಗೆ ತಲೆ ಬುರುಡೆ, ಎಲುಬು ಹಾಗೂ ಬಟ್ಟೆಗಳು ಕಾಣ ಸಿಕ್ಕಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ತೆರಳಿದ ಪೊಲೀಸರು ನಾಪತ್ತೆ ಪ್ರಕರಣಗಳ ಜಾಡು ಹಿಡಿದು ತನಿಖೆ ನಡೆಸಿದ್ದರು.ನಾಪತ್ತೆಯಾದ ನಾಗೇಶ್ ಅವರ ಮಗನನ್ನು ಸ್ಥಳಕ್ಕೆ ಕರೆಸಿದ್ದ ಪೊಲೀಸರು, ಸ್ಥಳದಲ್ಲಿ ಸಿಕ್ಕ ವಸ್ತುಗಳನ್ನು ಪರಿಶೀಲಿಸುವಂತೆ ಸೂಚಿಸಿದ್ದರು. ಸ್ಥಳದಲ್ಲಿ ಸಿಕ್ಕಿರುವ ಬಟ್ಟೆ ನಾಗೇಶ್ ಗೌಡ ಅವರದ್ದು ಎಂದು ಅವರ ಮಗ ಗುರುತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿನಾಗೇಶ್ ಗೌಡ
ಮೃತ ವ್ಯಕ್ತಿನಾಗೇಶ್ ಗೌಡ

ನಾಗೇಶ್ ಗೌಡ ಅವರು ನೆಕ್ಕರೆ ಕಾಡು ರಸ್ತೆಯಾಗಿ ಮನೆಯೊಂದಕ್ಕೆ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಬಿದ್ದು ಮೃತಪಟ್ಟಿರಬಹುದು ಅಥವಾ ಅವರಿಗೆ ಹೃದಯಾಘಾತ ಸಂಭವಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅವರು, ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT