ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆನ್ಸಿಂಗ್‌: ಭವಾನಿ ದೇವಿ ಪರಾಭವ

Published 26 ಸೆಪ್ಟೆಂಬರ್ 2023, 14:49 IST
Last Updated 26 ಸೆಪ್ಟೆಂಬರ್ 2023, 14:49 IST
ಅಕ್ಷರ ಗಾತ್ರ

ಹಾಂಗ್‌ಝೌ (ಪಿಟಿಐ): ಫೆನ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಭವಾನಿ ದೇವಿ ಅವರ ಯಶಸ್ಸಿನ ಓಟಕ್ಕೆ ಕ್ವಾರ್ಟರ್‌ ಫೈನಲ್‌ನಲ್ಲಿ ತೆರೆಬಿತ್ತು.

ಮಂಗಳವಾರ ನಡೆದ ಮಹಿಳೆಯರ ಸೇಬರ್‌ ವಿಭಾಗದ ಹಣಾಹಣಿಯಲ್ಲಿ ಭವಾನಿ 7–15 ರಿಂದ ಆತಿಥೇಯ ಚೀನಾದ ಯಕಿ ಶಾವೊ ಎದುರು ಪರಾಭವಗೊಂಡರು.

ಮೊದಲ ಅವಧಿಯಲ್ಲಿ ಭಾರತದ ಫೆನ್ಸರ್‌ ಮೂರು ‘ಟಚ್‌’ಗಳನ್ನು ಸಾಧಿಸಿದರೆ, ಚೀನಾದ ಎದುರಾಳಿ ಎಂಟು ‘ಟಚ್‌’ಗಳ ಮೂಲಕ 8–3 ರಲ್ಲಿ ಮೇಲುಗೈ ಪಡೆದರು. ಎರಡನೇ ಅವಧಿಯಲ್ಲಿ ಏಳು ಟಚ್‌ಗಳನ್ನು ಮಾಡಿದ ಶಾವೊ ಸೆಮಿಫೈನಲ್‌ಗೆ ಮುನ್ನಡೆದರು.

ಸೇಬರ್‌ ವಿಭಾಗದ ನಾಕೌಟ್‌ ಹಂತದ ಪೈಪೋಟಿಯಲ್ಲಿ ಮೊದಲು 15 ಟಚ್‌ಗಳನ್ನು ಮಾಡುವವರನ್ನು ವಿಜೇತರು ಎಂದು ಘೋಷಿಸಲಾಗುತ್ತದೆ.

30 ವರ್ಷದ ಭವಾನಿ ಲೀಗ್‌ ಹಂತದಲ್ಲಿ ಐವರನ್ನು ಮಣಿಸಿದ್ದರಲ್ಲದೆ, ಪ್ರಿ ಕ್ವಾರ್ಟರ್‌ನಲ್ಲಿ 15–9 ರಿಂದ ತೊನ್‌ಖಾವ್ ಫೊಕೆವ್‌ ವಿರುದ್ಧ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT