ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರತ್ಕಲ್ ಲೈಟ್ ಹೌಸ್ ಅಭಿವೃದ್ಧಿ ಕಾಮಗಾರಿ ಮಂಜೂರು

Last Updated 25 ಸೆಪ್ಟೆಂಬರ್ 2020, 9:38 IST
ಅಕ್ಷರ ಗಾತ್ರ

ಮಂಗಳೂರು: ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿರುವ ಸುರತ್ಕಲ್ ಲೈಟ್ ಹೌಸ್ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಯೋಜನೆ ಮಂಜೂರು ಮಾಡಿದೆ.

ಲೈಟ್ ಹೌಸ್ ನಿರ್ಮಾಣವನ್ನು 1969-70 ರಲ್ಲಿ ಪ್ರಾರಂಭಿಸಿ 1972ಕ್ಕೆ ಪೂರ್ಣಗೊಳಿಸಲಾಗಿದ್ದು, ಇದು ಮಂಗಳೂರಿನ ಪ್ರಮುಖ ಹೆಗ್ಗುರುತಾಗಿದೆ. ಇದನ್ನು ಅಭಿವೃದ್ಧಿ ಪಡಿಸುವಂತೆ ಕೇಂದ್ರ ಬಂದರು ಸಚಿವ ಮಾನ್ ಸುಖ್ ಮಾಂಡವೀಯ ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಮನವಿ ಮಾಡಿದ್ದರು. ಇದನ್ನು ಪುರಸ್ಕರಿಸಿರುವ ಸುರತ್ಕಲ್ ಲೈಟ್ ಹೌಸ್ ಯೋಜನೆಯ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾತಿಯನ್ನು ನೀಡಲಾಗಿದೆ.

ಡೈರೆಕ್ಟರೇಟ್ ಜನರಲ್ ಆಫ್ ಲೈಟ್‌ಹೌಸ್ ಮತ್ತು ಲೈಟ್‌ಶಿಪ್‌ಗಳು (ಡಿಜಿಎಲ್‌ಎಲ್) ಕಾಮಗಾರಿಗಳಿಗೆ ವಾಸ್ತುಶಿಲ್ಪ ವಿನ್ಯಾಸವನ್ನು ಅಂತಿಮಗೊಳಿಸಿದ್ದು, ಟೆಂಡರ್ ಗಳನ್ನು ಶೀಘ್ರದಲ್ಲೇ ಆಹ್ವಾನಿಸಲಾಗುತ್ತದೆ ಕೇಂದ್ರ ಸಚಿವರು ತಿಳಿಸಿದ್ದಾರೆ..

ಕ್ಯಾಪ್ಸುಲ್ ಲಿಫ್ಟ್ ಅಳವಡಿಸುವುದು ಹಾಗೂ ಸಂಪರ್ಕ ಸೇತುವೆ ನಿರ್ಮಾಣ ಸೇರಿದಂತೆ ಲೈಟ್ ಹೌಸ್ ನ ನವೀಕರಣ, ಪ್ರವೇಶ ದ್ವಾರ, ಸೆಕ್ಯೂರಿಟಿ ಕ್ಯಾಬಿನ್, ಟಿಕೇಟ್ ಕೌಂಟರ್ ನಿರ್ಮಾಣ, ಲ್ಯಾಂಡ್‌ಸ್ಕೇಪಿಂಗ್, ಹಾರ್ಡ್‌ಸ್ಕೇಪಿಂಗ್, ಲೈಟಿಂಗ್ ಹಾಗೂ ಮಕ್ಕಳ ಆಟದ ಪ್ರದೇಶ ಅಭಿವೃದ್ಧಿ, ಪ್ರಸ್ತುತ ಇರುವ ಎಐಎಸ್ ಕಟ್ಟಡದ ನೆಲಮಹಡಿಯನ್ನು ಗ್ಯಾಲರಿಯನ್ನಾಗಿ ಮತ್ತು 1 ನೇ ಮಹಡಿಯನ್ನು ಲೈಟ್ ಹೌಸ್ ಕಾರ್ಯಾಚರಣಾ ಕೊಠಡಿಯನ್ನಾಗಿ ಪರಿವರ್ತಿಸುವುದು, ಲೈಟ್ ಹೌಸ್ ಸುತ್ತಲಿನ ಅವರಣಗೋಡೆ ಅಭಿವೃದ್ಧಿ, ಲೈಟ್ ಹೌಸ್ ನಿಂದ ಬೀಚ್ ಗೆ ಸಂಪರ್ಕ ಕಲ್ಪಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಸುರತ್ಕಲ್ ಲೈಟ್ ಹೌಸ್ ನವೀಕರಣದ ಬಗ್ಗೆ ಸಲ್ಲಿಸಿದ್ದ ಕೋರಿಕೆಯನ್ನು ಪುರಸ್ಕರಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರು ಮಾಡಿರುವ ಕೇಂದ್ರ ಸಚಿವ ಮಾನ್ ಸುಖ್ ಮಾಂಡವೀಯ ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT