ಎಸ್‌ವಿಪಿ ಪ್ರಶಸ್ತಿಗೆ ತಾಳ್ತಜೆ ವಸಂತ ಕುಮಾರ್, ಓಎಲ್ ನಾಗಭೂಷಣ ಸ್ವಾಮಿ ಆಯ್ಕೆ

ಮಂಗಳೂರು: ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿಗೆ ವಿಶ್ರಾಂತ ಕನ್ನಡ ಪ್ರಾಧ್ಯಾಪಕ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಡಾ.ತಾಳ್ತಜೆ ವಸಂತ ಕುಮಾರ್ (2022ರ ಸಾಲಿನ ಪ್ರಶಸ್ತಿ) ಹಾಗೂ ವಿಮರ್ಶಕ ಡಾ.ಒ.ಎಲ್. ನಾಗಭೂಷಣ ಸ್ವಾಮಿ (2023ರ ಸಾಲಿನ ಪ್ರಶಸ್ತಿ) ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ₹10 ಸಾವಿರ ನಗದು ಬಹುಮಾನ ಒಳಗೊಂಡಿದೆ.
ಪ್ರೊ.ಬಿ.ಎ. ವಿವೇಕ ರೈ ಅಧ್ಯಕ್ಷತೆಯ ಸಮಿತಿ ಈ ಆಯ್ಕೆ ಮಾಡಿದೆ. ಪ್ರೊ.ಎಸ್.ವಿ.ಪಿ ಅವರ ಜನ್ಮದಿನವಾದ ಫೆಬ್ರುವರಿ 8ರಂದು ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಎಸ್‌ವಿಪಿ ಸಂಸ್ಮರಣ ಸಮಿತಿಯ ಕಾರ್ಯದರ್ಶಿ ಡಾ.ನರಸಿಂಹ ಮೂರ್ತಿ ಆರ್. ತಿಳಿಸಿದ್ದಾರೆ.
ಜನವರಿ 21 ರಿಂದ 29 ರವರೆಗೆ ರಾಜ್ಯವ್ಯಾಪಿ ಬಿಜೆಪಿ ವಿಜಯಸಂಕಲ್ಪ ಅಭಿಯಾನ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.