ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಮಣ್ಣು ತೆರವು ಕಾರ್ಯ ಪೂರ್ಣ, ರೈಲು ಸಂಚಾರ ಪುನರಾರಂಭ

Last Updated 18 ಜುಲೈ 2021, 6:56 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ದಕ್ಷಿಣ ರೈಲ್ವೆಗೆ ಸೇರಿದ ಕುಲಶೇಖರ- ಪಡೀಲ್ ರೈಲ್ವೆ ಸುರಂಗ ಮಾರ್ಗದ ಬಳಿ ಜುಲೈ 16ರಂದು ಭೂ ಕುಸಿತವಾಗಿ ಹಳಿಗಳ ಮೇಲೆ ಮಣ್ಣು ಬಿದ್ದಿದ್ದನ್ನು ತೆಗೆಯುವ ಕೆಲಸ ಪೂರ್ಣಗೊಂಡಿದೆ.

ಕಲ್ಲು ಮಣ್ಣಿನ ತೆರವು ಕಾರ್ಯಾಚರಣೆ ಶನಿವಾರ ತಡರಾತ್ರಿಯವರೆಗೂ ನಡೆದಿದ್ದು, ಇಂದು ಬೆಳಗ್ಗಿನಿಂದ ಮತ್ತೆ ರೈಲು ಸಂಚಾರ ಪುನರಾರಂಭಗೊಂಡಿದೆ.

ಪಾಲ್ಘಾಟ್ ರೈಲ್ವೆ ವಿಭಾಗಕ್ಕೆ ಬರುವ ಈ ಹಳಿಯಲ್ಲಿ ಇಂದಿನಿಂದ ರೈಲು ಸಂಚಾರ ಪುನಾರಂಭಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಅದರಂತೆ ಭಾನುವಾರ ಬೆಳಿಗ್ಗೆ 8:45ರ ವೇಳೆಗೆ ಎರ್ನಾಕುಲಂನಿಂದ ಅಜ್ಮೀರ್‌ಗೆ ಮೊದಲ ರೈಲು ಪ್ರಯಾಣ ಬೆಳೆಸಿತು. ಮಣ್ಣು ಕುಸಿತಗೊಂಡ ಕುಲಶೇಖರ ಪ್ರದೇಶದಲ್ಲಿ ರೈಲು ತೆರಳುವ ವೇಳೆ ರೈಲ್ವೆ ಇಲಾಖೆ ಸಿಬ್ಬಂದಿ ಇದ್ದರು.

ಬೆಂಗಳೂರು-ಕಾರವಾರ-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಶನಿವಾರ ರದ್ದಾಗಿದೆ.

ಭೂ ಕುಸಿತವಾಗಿರುವ ಕಾರಣ ಈ ಹಳಿಯ ಮೂಲಕ ಚಲಿಸುವ ಎಲ್ಲ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದ್ದು, ದಕ್ಷಿಣ ಮಧ್ಯ ರೈಲ್ವೆ ಸೋಮವಾರದಿಂದ ಕಾಯ್ದಿರಿಸಿದ ರೈಲುಗಳನ್ನು ಪುನರಾರಂಭಿಸಲಿದೆ.

ರೈಲ್ವೆ ಇಲಾಖೆಯು ಒಂದು ವರ್ಷದಲ್ಲಿ ಪ್ರಮುಖ ಟ್ರ್ಯಾಕ್ ಬಲಪಡಿಸುವ ಕಾರ್ಯ ಕೈಗೊಂಡಿದ್ದು, ಇದೀಗ ರೈಲುಗಳು ಚಗ್ ಮಾಡಬಹುದಾದ ಗರಿಷ್ಠ ಅನುಮತಿಸುವ ವೇಗವನ್ನು ಹೆಚ್ಚಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ರಾತ್ರಿಯಿಂದ ಮಳೆ ಮತ್ತಷ್ಟು ಬಿರುಸುಗೊಂಡಿದೆ. ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ.

ಪುತ್ತೂರು ಕಬಕ -ಸುಬ್ರಹ್ಮಣ್ಯ ರೈಲ್ವೆ ಹಳಿಯ ನಡುವೆ ವೀರಮಂಗಲ ಗಡಿಪಿಲ ಸಮೀಪದಲ್ಲಿ ರೈಲು ಚಲಿಸುತ್ತಿದ್ದಾಗ ಧರೆ ಕುಸಿದು ರೈಲಿನ ಗಾರ್ಡ್‌ಗೆ ಹಾನಿಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಮಂಗಳೂರು-ಬೆಂಗಳೂರು ಪ್ರಯಾಣಿಕ ರೈಲು ಈ ಹಳಿಯಲ್ಲಿ ಹಾದು ಹೋಗುತ್ತಿದ್ದಾಗ ಏಕಾಏಕಿ ಧರೆ ಕುಸಿದಿದ್ದು, ಮಣ್ಣು ರೈಲಿನ ಮುಂಭಾಗಕ್ಕೆ ಕುಸಿದಿದೆ.

ರೈಲು ಈಗ ಹಳಿಯಲ್ಲಿ ಬಾಕಿಯಾಗಿದ್ದು, ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಣ್ಣು ತೆರವು ಕಾರ್ಯ ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದು ತೆರವು ಕಾರ್ಯ ಮುಗಿದಿದ್ದು, ರೈಲು ಸಂಚಾರ ಸುಮಾರು 40 ನಿಮಿಷ ವಿಳಂಬವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT