ಶನಿವಾರ, ಮಾರ್ಚ್ 25, 2023
29 °C

3 ದಿನಗಳ ರಾಜ್ಯ ಮಟ್ಟದ ಕೃಷಿ ಮೇಳ: ಶಾಸಕ ಉಮಾನಾಥ ಕೋಟ್ಯಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಲ್ಕಿ: ‘ಕೃಷಿ ಬದುಕನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ತಲುಪಿಸುವ ಉದ್ದೇಶದಿಂದ ಮೂಲ್ಕಿ ಬಳಿಯ ಕೋಲ್ನಾಡಿನಲ್ಲಿ ಜನವರಿ 14, 15 ಮತ್ತು 16ರಂದು ರಾಜ್ಯ ಮಟ್ಟದ ಕೃಷಿ ಮೇಳ ನಡೆಯಲಿದೆ’ ಎಂದು ಶಾಸಕ ಹಾಗೂ ಸಮಿತಿಯ ಗೌರವ ಮಾರ್ಗದರ್ಶಕ ಉಮಾನಾಥ ಕೋಟ್ಯಾನ್ ಹೇಳಿದರು. 

ಮೂಲ್ಕಿ ಬಳಿಯ ಬೆಳ್ಳಾಯರು ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಕೃಷಿ ಮೇಳದ ಅಧಿಕೃತ ಲಾಂಛನ ಹಾಗೂ ಹೆಸರನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕೊಲ್ನಾಡು ವಿನಯ ಕೃಷಿ ಬೆಳೆಗಾರರ ಸಂಘ, ಮಂಗಳೂರು ಪ್ರಣವ್ ಸೌಹಾರ್ದ ಸಹಕಾರಿ ಜಂಟಿಯಾಗಿ, ಪಡುಪಣಂಬೂರು ಗ್ರಾಮ ಪಂಚಾಯಿತಿ, ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317ಡಿ ಅತಿಥೇಯ ಕ್ಲಬ್ ಕದ್ರಿ ಹಿಲ್ಸ್, ಅರಸು ಡೈರಿ ಫಾರ್ಮ್ ಪಡುಪಣಂಬೂರು, ಸಾವಯವ ಕೃಷಿ ಗ್ರಾಹಕ ಬಳಗ, ಶಾರದ ಇನ್ಫ್ರಾಡಿಸೈನ್ ಇಂಡಿಯಾ ಹಾಗೂ ಸರ್ಕಾರಿ ಇಲಾಖೆಗಳ ನೆರವಿನಲ್ಲಿ ಕಾರ್ಯಕ್ರಮ ಆಯೋಜಿಸಿವೆ ಎಂದರು.

ಮೇಳದ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷ ಪ್ರಣವ್ ಸೌಹಾರ್ದ ಸಹಕಾರಿ ಅಧ್ಯಕ್ಷ ಜಿ.ಆರ್.ಪ್ರಸಾದ್ ಮಾಹಿತಿ ನೀಡಿ, ಪ್ರಸ್ತುತ ಕೃಷಿ ಮೇಳಕ್ಕೆ ‘ಕೃಷಿ ಸಿರಿ’ ಹೆಸರನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಮಟ್ಟದ ಕೃಷಿ ಮೇಳದ ಲಾಂಛನವನ್ನು ಕರಾವಳಿ ಭಾಗದಲ್ಲಿನ ಕೃಷಿ ಬದುಕಿನ ಚಿತ್ರಣದೊಂದಿಗೆ ರೂಪಿಸಲಾಗಿದೆ. ಸಾರ್ವಜನಿಕರಿಂದ ಆಹ್ವಾನಿಸಿದ್ದರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಈ ಎರಡೂ ಕಲಾಕೃತಿಗಳನ್ನು ನೀಡಿದವರನ್ನು ಕೃಷಿ ಮೇಳದಲ್ಲಿ ಗೌರವಿಸಲಾಗುವುದು ಎಂದರು. ಮೇಳದ ಆರ್ಥಿಕ ವ್ಯವಸ್ಥೆ ಹಾಗೂ ಇತರ 21 ಉಪ ಸಮಿತಿಗಳ ಜವಬ್ದಾರಿಯ ಬಗ್ಗೆ ಮಾಹಿತಿ ನೀಡಲಾಯಿತು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾರದಾ ಇನ್ಫ್ರಾಡಿಸೈನ್ ಇಂಡಿಯಾ ಪ್ರವರ್ತಕ ಜೀವನ್ ಕೆ. ಶೆಟ್ಟಿ ಸಲಹೆ ನೀಡಿದರು. ಲಯನ್ಸ್ ಜಿಲ್ಲಾ ಗವರ್ನರ್ ವಸಂತ್‌ಕುಮಾರ್ ಶೆಟ್ಟಿ, ಪ್ರಮುಖರಾದ ಡಾ.ಅಣ್ಣಯ್ಯ ಕುಲಾಲ್, ಕೋಲ್ನಾಡುಗುತ್ತು ರಾಮಚಂದ್ರ ನಾಯಕ್, ರತ್ನಾಕರ್, ವಿದ್ಯಾಧರ್ ಶೆಟ್ಟಿ ಕೋಲ್ನಾಡುಗುತ್ತು, ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯ ಹರಿಪ್ರಸಾದ್, ಸಂತೋಷ್‌ಕುಮಾರ್ ಶೆಟ್ಟಿ, ಪತ್ರಕರ್ತ ನರೇಂದ್ರ ಕೆರೆಕಾಡು ಮಾತನಾಡಿದರು.

ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ, ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸುಭಾಷ್‌ ಶೆಟ್ಟಿ, ಮಾಜಿ ಅಧ್ಯಕ್ಷ ಸುನಿಲ್ ಆಳ್ವ, ಕೃಷಿ ಅಧಿಕಾರಿ ಬಶೀರ್ ಅಹ್ಮದ್, ಹಳೆಯಂಗಡಿ ಲಯನ್ಸ್ ಕ್ಲಬ್‌ ಅಧ್ಯಕ್ಷ ಅರುಣಕುಮಾರ್ ಶೆಟ್ಟಿ ಇದ್ದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು