ಉಪ್ಪಿನಂಗಡಿ ಬ್ಯಾಂಕ್ ರಸ್ತೆಯ ನಿವಾಸಿ ಅಬ್ಬಾಸ್ ಎಂಬುವರ ಮೊಬೈಲ್‌ಗೆ 92-3471745608 ಸಂಖ್ಯೆಯಿಂದ ಕರೆ ಬಂದಿದ್ದು, ಹಿಂದಿ ಭಾಷೆಯಲ್ಲಿ ಮಾತನಾಡಿದ ವ್ಯಕ್ತಿ, ನಾನು ದೆಹಲಿಯಿಂದ ಸಿಬಿಐ ಅಧಿಕಾರಿ ಮಾತಾನಾಡುತ್ತಿರುವುದಾಗಿ ತಿಳಿಸಿದ್ದಾನೆ. ಮಗನ ಹೆಸರು ಉಲ್ಲೇಖಿಸಿ, ಆತ ವಿದ್ಯಾಭ್ಯಾಸ ಮಾಡುತ್ತಿರುವ ಬಗ್ಗೆ ನಿಖರವಾಗಿ ತಿಳಿಸಿದ್ದಾನೆ. ಆತ ಏನೆಲ್ಲಾ ಮಾಡುತ್ತಿದ್ದಾನೆ ಎಂಬ ಅರಿವು ನಿಮಗಿದೆಯಾ? ಅವನನ್ನು ತಕ್ಷಣ ಬಂಧಿಸಬೇಕಾಗುತ್ತದೆ ಎಂದು ಬೆದರಿಸಿದ್ದಾನೆ. ಕರೆ ಬಂದ ಸಂಖ್ಯೆಯ ಪ್ರೊಫೈಲ್ ಫೊಟೊ ಕೂಡ ಪೊಲೀಸ್ ಅಧಿಕಾರಿಯಂತೆ ಇರುವ ವ್ಯಕ್ತಿಯದ್ದೇ ಇದ್ದು, ಸಂಖ್ಯೆಯ ಕೆಳಗೆ ಸಿಬಿಐ ಎಂದೂ ಇದೆ.