ಭಾನುವಾರ, ನವೆಂಬರ್ 29, 2020
20 °C

ತುಳು ನಟ ಸುರೇಂದ್ರ ಬಂಟ್ವಾಳ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಬಂಟ್ವಾಳದ ಭಂಡಾರಿಬೆಟ್ಟು ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಹಿಂದೂ ಸಂಘಟನೆ ಮಾಜಿ ಸದಸ್ಯ, ತುಳು ಚಿತ್ರನಟ ಸುರೇಂದ್ರ ಬಂಟ್ವಾಳ (39) ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ನಾಲ್ಕು ವರ್ಷಗಳಿಂದ ಈ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಸುರೇಂದ್ರ ಬಂಟ್ವಾಳ ಮಂಗಳವಾರದಿಂದ ಮೊಬೈ
ಲ್‌ ಕರೆ ಸ್ವೀಕರಿಸುತ್ತಿರಲಿಲ್ಲ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಸುರೇಂದ್ರ ಕೊಲೆಯಾಗಿರುವುದು ಪತ್ತೆಯಾಗಿದೆ. ಮಂಗಳವಾರ ರಾತ್ರಿ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ.

ಈ ಹಿಂದೆ ಬಜರಂಗದಳದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸುರೇಂದ್ರ ಬಂಟ್ವಾಳ ನಂತರ ಸಂಘಟನೆ ತೊರೆದಿದ್ದರು. ಎರಡು ವರ್ಷದ ಹಿಂದೆ ಬಜರಂಗದಳದ ಭುವಿತ್‌ ಶೆಟ್ಟಿ ನಡೆಸಿದ ಹಲ್ಲೆಗೆ ಪ್ರತೀಕಾರವಾಗಿ, ಸುರೇಂದ್ರ ಬಂಟ್ವಾಳ ತಂಡ ಬಡ್ಡಕಟ್ಟೆಯಲ್ಲಿ ಬಜರಂಗದಳ ಕಾರ್ಯಕರ್ತರ ಮೇಲೆ ತಲವಾರಿನಿಂದ ಹಲ್ಲೆಗೆ ಯತ್ನಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು