ಶನಿವಾರ, ಸೆಪ್ಟೆಂಬರ್ 18, 2021
29 °C

ಸುಳ್ಯ: ಯುವಕನಿಗೆ ಒಟ್ಟಿಗೆ 2 ಡೋಸ್ ಕೋವಿಡ್‌ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಳ್ಯ: ತಾಲ್ಲೂಕಿನ ದುಗ್ಗಲಡ್ಕ ಪ್ರೌಢಶಾಲೆಯಲ್ಲಿ ನಡೆದ ಲಸಿಕಾ ಶಿಬಿರದಲ್ಲಿ ಯುವಕನಿಗೆ ಆರೋಗ್ಯ ಸಹಾಯಕಿಯೊಬ್ಬರು ಕೆಲವೇ ಕ್ಷಣಗಳ ಅಂತರದಲ್ಲಿ ಎರಡು ಡೋಸ್ ಲಸಿಕೆ ನೀಡಿದ್ದಾರೆ.

ಬುಧವಾರ ದುಗ್ಗಲಡ್ಕ ಪ್ರೌಢಶಾಲೆಯಲ್ಲಿ ಕೋವಿಡ್ ಲಸಿಕೆ ಶಿಬಿರ ನಡೆಯುತ್ತಿತ್ತು. ಕೂಟೇಲು ಸಿಆರ್‌ಸಿಯ ಬಾಲಸುಬ್ರಹ್ಮಣ್ಯಂ ಅವರ ಪುತ್ರ, ಕೆ.ಬಿ. ಅರುಣ್ ಮೊದಲ ಡೋಸ್ ಪಡೆಯಲು ಬಂದಿದ್ದರು. ಆರೋಗ್ಯ ಸಹಾಯಕಿಯು ಅರುಣ್‌ ಅವರಿಗೆ ಲಸಿಕೆ ನೀಡಿದ್ದರು. ಇದಾದ ನಂತರವೂ ಮಾತ್ರೆ ಪಡೆಯುವ ಉದ್ದೇಶದಿಂದ ಅರುಣ್ ಅಲ್ಲೇ ಕುಳಿತಿದ್ದರು. ಸ್ವಲ್ಪ ಸಮಯದಲ್ಲಿ ಹೊಸ ಸಿರಿಂಜ್‌ನೊಂದಿಗೆ ಬಂದ ಆರೋಗ್ಯ ಸಹಾಯಕಿಯು ಬೇರೆಯವರು ಕುಳಿತಿದ್ದಾರೆ ಎಂದು ಭಾವಿಸಿ ಪುನಃ ಅರುಣ್‌ ಅವರಿಗೇ ಲಸಿಕೆ ನೀಡಿದ್ದಾರೆ.

‘ಆತಂಕ ಪಡಬೇಕಾಗಿಲ್ಲ. ಸರಿಯಾಗಿ ಆಹಾರ ಸೇವನೆ ಮಾಡಲಿ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್‌ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು