ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿಯಲ್ಲಿ ಉಳ್ಳಾಲದ ವ್ಯಕ್ತಿ ನಿಗೂಢ ಸಾವು: ತವರೂರಿಗೆ ಮೃತದೇಹ

Last Updated 23 ಮಾರ್ಚ್ 2021, 5:31 IST
ಅಕ್ಷರ ಗಾತ್ರ

ಉಳ್ಳಾಲ: ವಿದೇಶದಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿ ನಿಗೂಢವಾಗಿ ಮೃತಪಟ್ಟಿದ್ದು, ಮೃತದೇಹ ಊರಿಗೆ ತರಲು ಶಾಸಕ ಯು.ಟಿ ಖಾದರ್ ಅವರು ಸ್ಪಂದಿಸಿದ್ದಾರೆ. ಇಂಡಿಯನ್ ಸೋಷಿಯಲ್ ಫೋರಂ ಸಂಘಟನೆ ಮೃತದೇಹ ತವರೂರಿಗೆ ತರಲು ಶ್ರಮಿಸುತ್ತಿದೆ.

ಸೌದಿ ಅರೇಬಿಯಾದಲ್ಲಿ ಕೆಲಸಕ್ಕಿದ್ದ ಕುತ್ತಾರು ಪಂಡಿತ್ ಹೌಸ್ ನಿವಾಸಿ ರೊನಾಲ್ಡ್ ಡಿಸೋಜ (50) ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾರೆ. ಮಾ.19 ರಂದು ತಮ್ಮ ರೂಮಿನಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಅಂದು ಕುಟುಂಬದ ಸದಸ್ಯರ ಜೊತೆಗೆ ವಿಡಿಯೊ ಸಂಭಾಷಣೆ ನಡೆಸಿದ್ದ ರೊನಾಲ್ಡ್, ರಾತ್ರಿ ವೇಳೆ ಕರೆ ಸ್ವೀಕರಿಸುತ್ತಿರಲಿಲ್ಲ. ಎರಡು ದಿನಗಳಲ್ಲಿ ಊರಿಗೆ ಬರುವುದಾಗಿ ತಿಳಿಸಿದ್ದರು. ಅವರ ಸಾವಿನ ಕುರಿತು ಮಾ.21 ರಂದು ಮುಂಬೈ ಖಾಸಗಿ ಏಜೆನ್ಸಿ ಮೂಲಕ ಅವರ ಕುಟುಂಬದ ಸದಸ್ಯರಿಗೆ ಗೊತ್ತಾಗಿದೆ.

ಖಾದರ್ ಸ್ಪಂದನೆ: ಕುಟುಂಬದವರ ಮನವಿಯಂತೆ ಶಾಸಕ ಯು.ಟಿ ಖಾದರ್ ಅವರು, ಇಂಡಿಯನ್ ಸೋಷಿಯಲ್ ಫೋರಂ ಸಂಘಟನೆಯ ಜಿ.ಕೆ.ಸಲೀಂ ಗುರುವಾಯನಕೆರೆ ಮತ್ತು ಸಿದ್ದೀಖ್ ಉಳ್ಳಾಲ್ ಅವರನ್ನು ಸಂಪರ್ಕಿಸಿದ್ದರು. ಅವರು ಆಸ್ಪತ್ರೆ ಹುಡುಕಾಡಿ, ಪೊಲೀಸ್ ಪ್ರಕ್ರಿಯೆ ಮುಗಿದ ತಕ್ಷಣ ಮೃತದೇಹವನ್ನು ತವರೂರಿಗೆ ಕಳುಹಿಸುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೃತ ರೊನಾಲ್ಡ್ ಡಿಸೋಜ ಅವರಿಗೆ ಪತ್ನಿ ಸರಿತಾ ಡಿಸೋಜ ಮಕ್ಕಳಾದ ರಿಯೋನ್ ಮತ್ತು ರೋವಿನ್ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT