ಶನಿವಾರ, ಅಕ್ಟೋಬರ್ 1, 2022
23 °C
117ನೇ ಕಾಲೇಜು ದಿನಾಚರಣೆಯಲ್ಲಿ ವಿವಿ ಕುಲಪತಿ ಪ್ರೊ. ಯಡಪಡಿತ್ತಾಯ

ಕಾಲೇಜು ಜ್ಞಾನ, ಪರಂಪರೆಯ ಪ್ರತೀಕ: ಕುಲಪತಿ ಪ್ರೊ. ‍ಪಿ.ಎಸ್.ಯಡಪಡಿತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ವಿಶ್ವವಿದ್ಯಾಲಯ ಕಾಲೇಜು ಜ್ಞಾನ, ಪರಂಪರೆ, ಸಂಸ್ಕೃತಿಯ ಪ್ರತೀಕ. ಕಾಲೇಜಿನ ಈ ಗುಣ ಮುಂದೆಯೂ ಇರಲಿ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ‍ಪಿ.ಎಸ್.ಯಡಪಡಿತ್ತಾಯ ಆಶಿಸಿದರು.

ನಗರದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಬುಧವಾರ ನಡೆದ 117ನೇ ಕಾಲೇಜು ದಿನಾಚರಣೆಯಲ್ಲಿ ಅವರು ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕಿ ಸುನಂದಾ, ಪ್ರಾಂಶುಪಾಲೆ ಡಾ. ಅನಸೂಯಾ ರೈ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಧೀರಜ್‌ ಮಾತನಾಡಿದರು. ರಾಜಕೀಯ ವಿಜ್ಞಾನ ವಿಭಾಗ ಮುಖ್ಯಸ್ಥೆ ಡಾ. ಲತಾ ಎ. ಪಂಡಿತ್‌ ವಾರ್ಷಿಕ ವರದಿ ವಾಚಿಸಿದರು. ಮಂಗಳೂರು ವಿಶ್ವವಿದ್ಯಾಲಯ 2020ರಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಬಿ.ಎ. ಪದವಿಯಲ್ಲಿ 6ನೇ ರ‍್ಯಾಂಕ್‌ ಪಡೆದ ಸಾಯಿ ಸೂರ್ಯ, ಬಿ.ಕಾಂ.ನಲ್ಲಿ 8ನೇ ರ‍್ಯಾಂಕ್‌ ಪಡೆದ ಪ್ರಿಯದರ್ಶಿನಿ, ಬಿ.ಎ.ಯಲ್ಲಿ ಒಂಬತ್ತನೇ ರ‍್ಯಾಂಕ್‌ ಗಳಿಸಿದ ಸಂಧ್ಯಾ ಹಾಗೂ ಎನ್‌ಎಸ್‌ಎಸ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಅಪರ್ಣಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ವರ್ಷದ ಕ್ರೀಡಾ ಚಾಂಪಿಯನ್‌ಗಳಾದ ಅಭಿಷೇಕ್‌ ಹಾಗೂ ಅಂಕಿತಾ ಅವರಿಗೆ ಬಹುಮಾನ ವಿತರಿಸಲಾಯಿತು. ಯುಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ಗಳಾದ ಯುಸಿಎಂ ಸ್ಟ್ರೈಕರ್ಸ್‌ ಹಾಗೂ ರನ್ನರ್ಸ್‌ ಅಪ್‌ ಆಗಿ ಮೂಡಿಬಂದ ಯುಸಿಎಂ ಬ್ರಿಗೇಡ್‌ ತಂಡಗಳಿಗೆ ಟ್ರೋಫಿಗಳನ್ನು ವಿತರಿಸಲಾಯಿತು.

ಡಾ. ಕುಮಾರಸ್ವಾಮಿ ಎಂ ಹಾಗೂ ಡಾ. ಗಾಯತ್ರಿ ಎಂ ಕಾರ್ಯಕ್ರಮ ನಿರೂಪಿಸಿದರು. ಡಾ. ಹರೀಶ್‌ ಎ ಸ್ವಾಗತಿಸಿದರು. ಪ್ರಕಾಶ್‌ ವಂದಿಸಿದರು. ಅಂಕಿತಾ ಎಸ್‌, ಅಪರ್ಣಾ ಎಸ್‌ ಶೆಟ್ಟಿ, ಕಾವ್ಯಾ ಎನ್‌.ಕೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಯಕ್ಷಗಾನ ಪ್ರಸಂಗ ಸೇರಿದಂತೆ ಸಾಂಸ್ಕೃತಿಕ ವೈವಿಧ್ಯ ಪ್ರದರ್ಶಿಸಿದರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು