ಉಪ್ಪಿನಂಗಡಿ: ಉಪ್ಪಿನಂಗಡಿ ಸಹಕಾರಿ ಸಂಘದಲ್ಲಿ 72ನೇ ವರ್ಷದ ಸಹಕಾರಿ ಸಪ್ತಾಹದ ಆಚರಣೆ ನಿಮಿತ್ತ ಬುಧವಾರ ವಿವಿಧ ಕಾರ್ಯಕ್ರಮ ನಡೆಯಿತು.

ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾಶ್ರೀ ಯೋಜನೆಯಡಿ ಪ್ರೋತ್ಸಾಹಧನವನ್ನು ವಿತರಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಗ್ರಾಮೀಣಾಭಿವೃದ್ಧಿಗೆ ಹೆಬ್ಬಾಗಿಲಿನಂತೆ ರೈತರ ಹಿತವನ್ನು ಬಯಸುತ್ತಾ ಸಹಕಾರಿ ಕ್ಷೇತ್ರ ವಿಶಾಲವಾಗಿ ಬೆಳೆದು ನಿಂತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಅಗತ್ಯತೆಯನ್ನು ಪೂರೈಸುವ ದೃಷ್ಟಿಯಿಂದ ಸಹಕಾರಿ ಕ್ಷೇತ್ರ ಇನ್ನೂ ಬಲವರ್ಧನೆಗೊಂಡು, ಮಾದರಿ ಕ್ಷೇತ್ರವಾಗಿ ಉಳಿಸಿ ಬೆಳೆಸುವ ಕಾರ್ಯಗಳು ನಮ್ಮ ಮುಂದೆ ಇವೆ. ಈ ದೃಷ್ಟಿಯಿಂದ ಸಹಕಾರಿಗಳಾದ ನಾವೆಲ್ಲರೂ ಸಹಕಾರಿ ತತ್ವದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದರೆ ಮಾದರಿ ಕ್ಷೇತ್ರವಾಗಿ ಬೆಳೆಯುತ್ತದೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ದಯಾನಂದ ಎಸ್., ನಿರ್ದೇಶಕರಾದ ಪಿಜಕ್ಕಳ ವಸಂತ ಗೌಡ, ರಾಜೇಶ್, ರಾಘವ ನಾಯ್ಕ್, ಸುಂದರ ಕೆ.,ಪ್ರಕಾಶ್ ರೈ ಬಿ., ಸಂಧ್ಯಾ, ಗೀತಾ ಹಾಜರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ., ಸ್ವಾಗತಿಸಿದರು. ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ ಶೆಟ್ಟಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.