ಉಳ್ಳಾಲ: ಉಳ್ಳಾಲ ದರ್ಗಾದಲ್ಲಿ 26 ದಿನ ನಡೆಯುವ ಉರುಸ್ಗೆ ವಿವಿಧ ರಾಜ್ಯಗಳ ಭಕ್ತರು ಬರಲಿದ್ದು, ಎಲ್ಲ ಇಲಾಖೆಗಳ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಸೂಚನೆ ನೀಡಿದರು.

ಉಳ್ಳಾಲ ಉರುಸ್ ಪ್ರಯುಕ್ತ ವಿವಿಧ ಇಲಾಖೆಗಳ ಅಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಕಾನೂನು ಉಲ್ಲಂಘನೆ ಸಾಧ್ಯತೆ ಇರುವುದರಿಂದ ಪೊಲೀಸ್ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಾರಿಗೆ ಬಸ್ ಸೇವೆ, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.

ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಕ್ಷೇತ್ರ ವ್ಯಾಪ್ತಿಯ ಎಲ್ಲ ರಸ್ತೆಗಳು ಶೀಘ್ರವಾಗಿ ದುರಸ್ತಿ ಆಗಬೇಕು. ಮಾಸ್ತಿಕಟ್ಟೆಯಲ್ಲಿ ಬಾಕಿ ಉಳಿದಿರುವ ಇಂಟರ್ಲಾಕ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಾಹನ ದಟ್ಟಣೆ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಬಗ್ಗೆ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಅವರಿಗೆ ಸೂಚನೆ ನೀಡಿದರು.

ಸಿದ್ಧತೆ ಕೈಗೊಳ್ಳುವಂತೆ ಆರೋಗ್ಯಾಧಿಕಾರಿ, ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ದಯಾನಂದ, ಕೆಎಸ್ಆರ್ಟಿಸಿ, ಅಗ್ನಿಶಾಮಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಯಕ್ರಮವನ್ನು ದರ್ಗಾ ಅಧ್ಯಕ್ಷ ಹನೀಫ್ ಉದ್ಘಾಟಿಸಿ ಆರೋಗ್ಯ, ಶೈಕ್ಷಣಿಕ, ಸಹಿತ ವಿವಿಧ ಸಮಸ್ಯೆಗಳಿಗೆ ನೀಡುತ್ತಿರುವ ನೆರವು, ಸೇವೆ ಹಾಗೂ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಮುಖರಾದ ಸದಾಶಿವ ಉಳ್ಳಾಲ್, ಮತಡಿ, ಶಶಿಕಲಾ, ಸಪ್ನಾ ಹರೀಶ್, ಅಶ್ರಫ್, ನಾಸೀರ್ ಅಹ್ಮದ್ ಲಕ್ಕಿ ಸ್ಟಾರ್, ಖಾದರ್ ಷಾ, ಕಣಚೂರು ಮೋನು, ಪುಟ್ಟರಾಜು, ಪ್ರಮೋದ್, ಹರ್ಷವರ್ಧನ್, ಅಬೂಬಕ್ಕರ್, ಸಂತೋಷ್ ಕುಮಾರ್, ರವಿಚಂದ್ರ ನಾಯಕ್, ವಿನಯ ರಾಜ್, ರಫೀಕ್, ಐವನ್ ಡಿಸೋಜ, ಪದ್ಮರಾಜ್, ಅಶ್ರಫ್ ರೈಟ್ ವೇ, ಶಿಹಾಬುದ್ದೀನ್ ಸಖಾಫಿ, ಮುಸ್ತಫಾ ಮದನಿಗರ, ಇಸಾಕ್ ಮೇಲಂಗಡಿ, ನಾಝೀಮ್ ಮುಕಚೇರಿ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.