ಸೋಮವಾರ, ಜೂನ್ 27, 2022
21 °C

ಮಂಗಳೂರು: ವಿದೇಶಗಳಿಗೆ ಹೋಗುವ ಅನಿವಾರ್ಯತೆ ಇದ್ದವರಿಗೆ ಆದ್ಯತೆ‌ಯಲ್ಲಿ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಉದ್ಯೋಗ, ವಿದ್ಯಾಭ್ಯಾಸ ಇನ್ನಿತರ ಕಾರಣಕ್ಕೆ ವಿದೇಶಗಳಿಗೆ ಹೋಗುವ ಅನಿವಾರ್ಯತೆ ಇದ್ದವರಿಗೆ ಆದ್ಯತೆ‌ಯಲ್ಲಿ ಲಸಿಕೆ ನೀಡಲಾಗುತ್ತದೆ. 

ಇಲ್ಲಿನ ಡೊಂಗರಕೇರಿಯ ಕೆನರಾ ಹೈಸ್ಕೂಲ್ ಸುಧೀಂದ್ರ ಸಭಾಭವನದಲ್ಲಿ ಲಸಿಕೆ ಅಭಿಯಾನ‌ ಪ್ರಾರಂಭವಾಗಿದೆ. 

ಲಸಿಕೆ ಪಡೆದ ಪ್ರಮಾಣಪತ್ರವನ್ನು ಹಲವು ದೇಶಗಳು ಕಡ್ಡಾಯಗೊಳಿಸಿದ ಕಾರಣ ತುರ್ತಾಗಿ ವಿದೇಶಕ್ಕೆ ಹೋಗುವವರಿಗೆ ಸಮಸ್ಯೆ ಆಗಿತ್ತು. ಇದನ್ನು ಜಿಲ್ಲಾಡಳಿತದ ಗಮನಕ್ಕೆ ತರಲಾಗಿತ್ತು. 

ಭಾರತೀಯ ರೆಡ್ ಕ್ರಾಸ್ ಘಟಕದ ಕಾರ್ಯದರ್ಶಿಯನ್ನು ಸಮನ್ವಯಾಧಿಕಾರಿಯಾಗಿ ನೇಮಕ ಮಾಡಿದ್ದ ಜಿಲ್ಲಾಡಳಿತ, ಆನ್ ಲೈನ್ ನೋಂದಣಿಗೆ ಅವಕಾಶ ಕಲ್ಪಿಸಿತ್ತು.

ಚಿತ್ರಗಳು... ವಿದೇಶಗಳಿಗೆ ಹೋಗುವ ಅನಿವಾರ್ಯತೆ ಇದ್ದವರಿಗೆ ಆದ್ಯತೆ‌ಯಲ್ಲಿ ಲಸಿಕೆ

ಸುಮಾರು 600 ಜನರು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ ಎಲ್ಲ ದಾಖಲೆಗಳು ಸಮರ್ಪಕವಾಗಿದ್ದ  ಸುಮಾರು 500 ಜನರಿಗೆ ಲಸಿಕೆ ನೀಡಲು ಜಿಲ್ಲಾಡಳಿತ ವ್ಯವಸ್ಥೆ ಗೊಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು