ಮಂಗಳೂರು: ಆರೋಗ್ಯ ಒಂದೇ (ವನ್ ಹೆಲ್ತ್) ಎಂಬ ತತ್ವಕ್ಕೆ ಬದ್ಧವಾಗಿರುವ ತುಂಬೆ ಸಮೂಹವು ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ (ಜಿಎಂಯು) ತುಂಬೆ ಪಶುವೈದ್ಯಕೀಯ ಕಾಲೇಜಿನಲ್ಲಿ ಡಾಕ್ಟರ್ ಆಫ್ ವೆಟರಿನರಿ ಮೆಡಿಸಿನ್ (ಡಿವಿಎಂ) ಕೋರ್ಸ್ ಆರಂಭಿಸಿದೆ. ಈ ಕೋರ್ಸ್ಗೆ ಯುಎಇಯ ಕಮಿಷನ್ ಆಫ್ ಅಕಡೆಮಿಕ್ ಅಕ್ರೆಡಿಟೇಷನ್ (ಸಿಎಎ) ವತಿಯಿಂದ ಪ್ರಾಥಮಿಕ ಮಂಜೂರಾತಿ ಸಿಕ್ಕಿದೆ.

ಹೊಸ ಕೋರ್ಸ್ ಘೋಷಣೆ ಮಾಡಿದ ತುಂಬೆ ಸಮೂಹದ ಸ್ಥಾಪಕಾಧ್ಯಕ್ಷ ಡಾ.ತುಂಬೆ ಮೊಯ್ದೀನ್, ‘ಶಾರ್ಜಾದ ಮುವೈಲೆಹ್ನಲ್ಲಿ ತುಂಬೆ ವೆಟರಿನರಿ ಕ್ಲಿನಿಕ್ ಈಗಾಗಲೇ ಆರಂಭಗೊಂಡಿದೆ. ತುಂಬೆ ಮೆಡಿಸಿಟಿಯಲ್ಲಿ ತುಂಬೆ ಪಶುವೈದ್ಯಕೀಯ ಆಸ್ಪತ್ರೆಯ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದ್ದು, 2027ರ ಸೆಪ್ಟೆಂಬರ್ನಲ್ಲಿ ಕಾರ್ಯಾರಂಭ ಮಾಡಲಿದೆ. ಇದರೊಂದಿಗೆ ದುಬೈ, ರಾಸ್ ಅಲ್ ಖೈಮಹ್ದಲ್ಲಿ ದೊಡ್ಡ ಮತ್ತು ಸಣ್ಣ ಪ್ರಾಣಿಗಳಿಗಾಗಿ ತುಂಬೆ ಫಾರ್ಮ್, ತುಂಬೆ ಪಶುವೈದ್ಯಕೀಯ ಪ್ರಯೋಗಾಲಯ, ತುಂಬೆ ಪಶುವೈದ್ಯಕೀಯ ಔಷಧಾಲಯ ಮತ್ತು ತುಂಬೆ ಪಶುವೈದ್ಯಕೀಯ ಕ್ಲಿನಿಕ್ಗಳು ಹಾಗೂ ದುಬೈಯಲ್ಲಿ ಪಶುವೈದ್ಯಕೀಯ ಚಿಕಿತ್ಸಾ ಕೌಶಲ್ಯ ಪ್ರಯೋಗಾಲಯ ಸ್ಥಾಪನೆಯಾಗಲಿವೆ ಮತ್ತು ಇವುಗಳು ತುಂಬೆ ಪಶುವೈದ್ಯಕೀಯ ಕಾಲೇಜಿನ ಭಾಗವಾಗಿರಲಿವೆ’ ಎಂದು ತಿಳಿಸಿದರು.

ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಮಂಡ ವೆಂಕಟರಮಣ ಮಾತನಾಡಿದರು.

ವರ್ಷಕ್ಕೆ 60 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿರುವ ಈ ಕೋರ್ಸ್ ವಿದ್ಯಾರ್ಥಿಗಳಿಗೆ ಸಮಗ್ರ ಮತ್ತು ಜಾಗತಿಕ ಮಟ್ಟದ ಶಿಕ್ಷಣವನ್ನು ಒದಗಿಸಲಿದೆ. 30ಕ್ಕೂ ಹೆಚ್ಚು ಶೈಕ್ಷಣಿಕ ಮತ್ತು ಕೈಗಾರಿಕಾ ಸಹಭಾಗಿತ್ವ ಜಾಲದ ಬೆಂಬಲ ಈ ಕೋರ್ಸ್ಗೆ ಇದೆ. ತಪಾಸಣೆ, ಕ್ಲಿನಿಕಲ್ ರೊಟೇಷನ್, ಸಂಶೋಧನಾ ಅವಕಾಶ ಹಾಗೂ ಜಗತ್ತಿನ ಶ್ರೇಷ್ಠ ವಿಧಾನಗಳನ್ನು ಅನುಸರಿಸುವ ಅವಕಾಶಗಳನ್ನು ಇದು ವಿದ್ಯಾರ್ಥಿಗಳಿಗೆ ಒದಗಿಸಲಿದೆ. ಈ ಕೋರ್ಸ್ಗೆ ಲಂಡನ್ನ ರಾಯಲ್ ವೆಟರಿನರಿ ಕಾಲೇಜು, ರಷ್ಯಾದ ದಿ ಡಾನ್ ಸ್ಟೇಟ್ ವಿಶ್ವವಿದ್ಯಾಲಯ, ಯೂರೋಪ್, ಏಷ್ಯಾದ ಮತ್ತು ಮಧ್ಯಪ್ರಾಚ್ಯದ ಇತರ ಕೆಲವು ಶಿಕ್ಷಣ ಸಂಸ್ಥೆಗಳಂತಹ ಜಗತ್ತಿನ ಕೆಲವು ಪ್ರತಿಷ್ಠಿತ ಸಂಸ್ಥೆಗಳ ಸಹಭಾಗಿತ್ವವಿದೆ. ತರಬೇತಿ ವಿಧಾನ, ಅಧ್ಯಾಪನ ಅಭಿವೃದ್ಧಿ, ಸಹಭಾಗಿತ್ವದ ಸಂಶೋಧನೆ, ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ, ಜಾಗತಿಕ ಒಳನೋಟ ಹಾಗೂ ವಾಸ್ತವ ಜಗತ್ತಿನಲ್ಲಿ ಅನ್ವಯಿಸುವಿಕೆಗಳನ್ನು ಒಳಗೊಂಡ ಸಮೃದ್ದ ಕಲಿಕಾ ಅನುಭವವನ್ನು ಇದು ಒದಗಿಸಲಿದೆ.

ಹೊಸ ಕೋರ್ಸಿಗೆ ದಾಖಲಾತಿ ಪ್ರಾರಂಭವಾಗಿದೆ. ಆಸಕ್ತ ವಿದ್ಯಾರ್ಥಿಗಳು ನಮ್ಮ ವೆಬ್ಸೈಟ್ (www.gmu.ac.ae) ಅನ್ನು ಭೇಟಿ ನೀಡಬಹುದು ಅಥವಾ ಹೆಚ್ಚಿನ ವಿವರಗಳಿಗಾಗಿ ವಿಶ್ವವಿದ್ಯಾಲಯವನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.